ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ದೇಶದಲ್ಲಿ 58,929 ವಕ್ಫ್‌ ಆಸ್ತಿಗಳ ಅತಿಕ್ರಮಣ, ಕರ್ನಾಟಕದಲ್ಲಿ 869 : ಕೇಂದ್ರ

Published

on

ದೇಶದಲ್ಲಿ ವಕ್ಫ್‌ ಮಂಡಳಿಗಳ 58,929 ಆಸ್ತಿಗಳು ಅತಿಕ್ರಮವಾಗಿವೆ. ಈ ಪೈಕಿ ಕರ್ನಾಟಕದ 869 ಆಸ್ತಿಗಳೂ ಸೇರಿವೆ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ವರದಿಯಾಗಿದೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ನಮ್ಮ ಸಚಿವಾಲಯ ಮತ್ತು ಕೇಂದ್ರಿಯ ವಕ್ಫ್ ಕೌನ್ಸಿಲ್‌ಗೆ (ಸಿಡಬ್ಲ್ಯುಸಿ) ಕಾಲ ಕಾಲಕ್ಕೆ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. ಅವುಗಳನ್ನು ಸೂಕ್ತ ಕ್ರಮಕ್ಕಾಗಿ ರಾಜ್ಯ ವಕ್ಫ್ ಮಂಡಳಿಗಳು ಮತ್ತು ಸರ್ಕಾರಗಳಿಗೆ ರವಾನಿಸಲಾಗಿದೆ” ಎಂದಿದ್ದಾರೆ.

‘WAMSI'(ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆ) ಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ದೇಶದಲ್ಲಿ 58,929 ವಕ್ಫ್ ಆಸ್ತಿಗಳು ಅತಿಕ್ರಮಣವಾಗಿವೆ. ಈ ಪೈಕಿ ಕರ್ನಾಟಕದ 869 ವಕ್ಫ್ ಆಸ್ತಿಗಳು ಒಳಗೊಂಡಿವೆ.

 

ವಕ್ಫ್ ಕಾಯ್ದೆಯ ಸೆಕ್ಷನ್ 54 ಮತ್ತು 55ರ ಪ್ರಕಾರ, ರಾಜ್ಯ ವಕ್ಫ್ ಮಂಡಳಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಕ್ಫ್ ಆಸ್ತಿಗಳ ಅನಧಿಕೃತ ಒತ್ತುವರಿ ಮತ್ತು ಅತಿಕ್ರಮಣದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ರಿಜಿಜು ತಿಳಿಸಿದ್ದಾರೆ.

 

 

ಇದಲ್ಲದೆ ಸೆಕ್ಷನ್‌ 51(1-ಎ) ಪ್ರಕಾರ, ವಕ್ಫ್ ಆಸ್ತಿಯನ್ನು ಮಾರಾಟ, ಉಡುಗೊರೆ, ವಿನಿಮಯ, ಅಡಮಾನ ಅಥವಾ ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ವಕ್ಫ್ ಆಸ್ತಿಗಳ ಲೀಸ್ ರೂಲ್ಸ್ -2014 ಅನ್ನು ರೂಪಿಸಿದೆ. ಇದು ವಕ್ಫ್ ಆಸ್ತಿಗಳನ್ನು ಗುತ್ತಿಗೆಗೆ ನೀಡಲು ರಾಜ್ಯ ವಕ್ಫ್ ಮಂಡಳಿಗಳಿಗೆ ಅಧಿಕಾರ ನೀಡುತ್ತದೆ ಎಂದು ರಿಜಿಜು ಹೇಳಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version