Published
9 months agoon
By
Akkare News
ಬೆಂಗಳೂರಿನ ಕುಂಬಳಗೋಡು, ಕಲಾಸಿಪಾಳ್ಯ ಮತ್ತು ರಾಜರಾಜೇಶ್ವರಿ ನಗರದಲ್ಲಿ ಇರುವ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.


ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಸ್ಥಳೀಯ ಪೋಲಿಸರು ತಕ್ಷಣವೇ ಶಾಲೆಗಳಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೈದರಾಬಾದ್ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.


ಹೈದರಾಬಾದ್ನಲ್ಲಿ ನಡೆದ ಯಾವ ಅತ್ಯಾಚಾರ ಪ್ರಕರಣ ಸಂಬಂಧ ದುಷ್ಕರ್ಮಿಗಳು ಈ ಬೆದರಿಕೆ ಹಾಕಿದ್ದಾರೆ? ಕರ್ನಾಟಕಕ್ಕೂ ಅದಕ್ಕೂ ಸಂಬಂಧವೇನು ಎನ್ನುವ ಪ್ರಶ್ನೆಗಳು ಈಗ ಉದ್ಭವಿಸಿವೆ.


ಸೋಮವಾರ ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಫೋಟ ಮಾಡಿ ಕಟ್ಟಡ ಧ್ವಂಸ ಮಾಡುವುದಾಗಿ ಹಾಸನದ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆಗೆ ಭಾನುವಾರ ರಾತ್ರಿ ಬೆದರಿಕೆ ಸಂದೇಶ ಬಂದಿತ್ತು.
‘ಕೆಲವು ಪ್ರಕರಣಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವುದು, ಟಿಕೆಟ್ ನೀಡದೇ ₹ 100ಕ್ಕಿಂತ ಅಧಿಕ ವಂಚನೆ ಮಾಡುವುದೆಲ್ಲ ಇದರಲ್ಲಿ ಒಳಗೊಂಡಿದೆ. ಗಂಭೀರ ಸ್ವರೂಪದ ಪ್ರಕರಣ ಪತ್ತೆಯಾದ ತಕ್ಷಣವೇ ಅಂಥವರನ್ನು ಅಮಾನತು ಮಾಡಲಾಗುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.







