Connect with us

ಇತರ

ಸಮಾಜವಾದಿ ಪಕ್ಷವು 2027 ರ ಯುಪಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ: ಅಖಿಲೇಶ್ ಯಾದವ್

Published

on

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಯಾದ ಇಂಡಿಯಾ ಒಟ್ಟಾಗಿ ಸ್ಪರ್ಧಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. “ಇಂಡಿಯಾ ಮೈತ್ರಿ ಒಗ್ಗಟ್ಟಾಗಿದ್ದು ನಾವು ಅದರೊಂದಿಗೆ ದೃಢವಾಗಿ ನಿಂತಿದ್ದೇವೆ. ಮೈತ್ರಿಕೂಟವು ಒಟ್ಟಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತದೆ.” ಎಂದು ಅವರು ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ಮೇ ತಿಂಗಳ ಹೇಳಿಕೆಗಳ ಕುರಿತ ಪ್ರಶ್ನೆಗೆ ಅಖಿಲೇಶ್ ಉತ್ತರಿಸುತ್ತಿದ್ದರು. ಮಸೂದ್ ಈ ಮೇ ತಿಂಗಳಲ್ಲಿ“[ಸಮಾಜವಾದಿ ಪಕ್ಷದೊಂದಿಗಿನ] ಮೈತ್ರಿಯಿಂದಾಗಿ ಕಾಂಗ್ರೆಸ್ ಹಾನಿಯನ್ನು ಎದುರಿಸುತ್ತಿದೆ” ಎಂದು ಹೇಳಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸಹರಾನ್‌ಪುರ ಸಂಸದರಾಗಿರುವ ಇಮ್ರಾನ್ ಮಸೂದ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಪರಿಷ್ಕೃತ ಸೀಟು ಹಂಚಿಕೆ ವ್ಯವಸ್ಥೆಗೆ ಕರೆ ನೀಡಿದ್ದರು. “80-17 ಸೂತ್ರ”ವು 2027 ರ ರಾಜ್ಯ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

“ಅಂತಹ ಯಾವುದೇ ಹೇಳಿಕೆಯ ಬಗ್ಗೆ ನಮಗೆ ಚಿಂತೆ ಇಲ್ಲ. ಯಾರು ಇಂಡಿಯಾ ಮೈತ್ರಿಯನ್ನು ತೊರೆಯಲು ಬಯಸುತ್ತಾರೋ ಅವರು ತೊರೆಯಬಹುದು.” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement