Published
8 months agoon
By
Akkare News
ದಿನಾಂಕ 23.06.2025 ರಂದು ಬಿಜೆಪಿಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತ ನೀಡಿರುತ್ತಾರೆ. ಇದರ ಸಲುವಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪುತ್ತೂರಿನ ಶಾಸ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೇಸ್ ಮುಂದಾಳತ್ವದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ‘ಬಿಜೆಪಿಯ ಸುಳ್ಳಿಗೆ ಉತ್ತರ’ ಜನಜಾಗೃತಿ ಸಭೆ ನಡೆಯಲಿದೆ.
ಜನಜಾಗೃತಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್
ಸಚಿವರಾದ ರಮಾನಾಥ ರೈ.ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಶಾಸಕರಾದ ಐವನ್ ಡಿ. ಸೋಜ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್, ಮಿಥುನ್ ರೈ ರಕ್ಷಿತ್ ಶಿವರಾಮ್,ಕೃಷ್ಣಪ್ಪ ಸುಳ್ಯ, ಇನಾಯತ್ ಆಲಿ ಮುಂತಾದ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.