Connect with us

ಇತ್ತೀಚಿನ ಸುದ್ದಿಗಳು

ನಾಳೆ ಕೋಡಿಂಬಾಡಿಯಲ್ಲಿ “ಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರ” ಎಂಬ ವಿಶಿಷ್ಟ ಕಾರ್ಯಕ್ರಮ

Published

on

 ದಿನಾಂಕ 30 / 06/ 2025 ನೇ ಸೋಮವಾರ ಬೆಳಿಗ್ಗೆ ಗಂಟೆ 09.30 ಕ್ಕೆ ಸರಿಯಾಗಿ ನಮ್ಮ ಜನಪ್ರಿಯ ಶಾಸಕರಾದ ಶ್ರೀಯುತ ಅಶೋಕ್ ಕುಮಾರ್ ರೈ ಯವರ ನೇತ್ರೃತ್ವದಲ್ಲಿ…, ಬಿಜೆಪಿ ಪ್ರಾಯೋಜಿತ ಸುಳ್ಳು ಅಪಪ್ರಚಾರದ ವಿರುಧ್ಧ ಜನಸಾಮಾನ್ಯರಲ್ಲಿ ಜಾಗ್ರೃತಿ ಮೂಡಿಸಲು,ಕೋಡಿಂಬಾಡಿ ಜಂಕ್ಷನ್” ನಲ್ಲಿ “ಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರ” ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 


ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಪುಡಾ ಅಧ್ಯಕ್ಷರಾದ ಅಮಲ ರಾಮಚಂದ್ರ ಭಟ್,ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜರಾಮ್ ಕೆ.ಬಿ ಮತ್ತು ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಭಾಗವಹಿಸಲಿದ್ದಾರೆ.ಅಲ್ಲದೆ ಈ ಸಂಧರ್ಭದಲ್ಲಿ ಮಾನ್ಯ ಶಾಸಕರು ಹಾಗೂ ಕಾಂಗ್ರೇಸ್ ಪಕ್ಷದ ರಾಜ್ಯಮಟ್ಟದ ನಾಯಕರು,ಜಿಲ್ಲಾ ನಾಯಕರು, ಪಕ್ಷದ ಅನನ್ಯ ಜವಾಬ್ದಾರಿಯನ್ನು ಹೊತ್ತಿರುವ ಪ್ರಮುಖ ಮುಖಂಡರು ಭಾಗವಹಿಸುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರುಗಳು ಮತ್ತು ಎಲ್ಲಾ ಬೂತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ,ಹಾಗೂ ಪಕ್ಷದ ಕಾರ್ಯಕರ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ
ವಿನಂತಿಸುವ ….,
ಯು.ಟಿ ತೌಸಿಫ್ – ಅಧ್ಯಕ್ಷರು
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ
•ಮೋನಪ್ಪ ಗೌಡ ಪಮ್ಮನಮಜಲು – ಅಧ್ಯಕ್ಷರು
ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಸಮಿತಿ


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version