Connect with us

ಇತ್ತೀಚಿನ ಸುದ್ದಿಗಳು

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಟಿ ಸೇಲ್ ಪ್ರಯುಕ್ತ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

Published

on

ಪುತ್ತೂರು, ಜು. 11: ನಗರದ ಮುಖ್ಯ ರಸ್ತೆಯಲ್ಲಿರುವ ಚಿನ್ನಾಭರಣ ಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಟಿ ಸೇಲ್ ಪ್ರಯುಕ್ತ ಗ್ರಾಹಕರಿಗೆ ಜು. 12 ರಿಂದ ಜು.25 ರವರೆಗೆ ಚಿನ್ನದ, ವಜ್ರದ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ 300 ರೂ. ನೇರ ರಿಯಾಯಿತಿ ಹಾಗೂ ಪ್ರತಿ : ಕ್ಯಾರೆಟ್ ಗೋ ವಜ್ರಾಭರಣಗಳ ಖರೀದಿಯಲ್ಲಿ 5000 ರೂ. ನೇರ ರಿಯಾಯಿತಿ ಮತ್ತು ಎಲ್ಲಾ ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿ.ಗೆ 3000 ರೂ. ನೇರ ರಿಯಾಯಿತಿ ನೀಡಲಾಗುವುದು. ಉತ್ಕೃಷ್ಟ ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳು ಅತ್ಯಾಕರ್ಷಕ ಬೆಲೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಜಿಲ್ಲೆಯ ಅತೀ ದೊಡ್ಡ ಸುಮಾರು 25700 ಅಧಿಕ ವೆರೈಟಿ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹ ದೊಂದಿಗೆ ಶಾಪಿಂಗ್‌ನ ಹೊಸ ಅನುಭೂತಿ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

1957 ರಲ್ಲಿ ಆರಂಭಗೊಂಡ  ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ದತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆಂಟಿಕ್ ಚಿನ್ನಾಭರಣಗಳ ವಿನೂತನ ಕಲೆಕ್ಷನ್‌ಗಾಗಿ ಪ್ರಾಚಿ, ಲೈಟ್‌ ವೈಟ್ ಆ್ಯಂಟಿಕ್ ಆಭರಣಗಳಿಗಾಗಿ ಪ್ರಾಚಿ ಇಲೈಟ್, ಬಹು ಬೇಡಿಕೆಯ ಲೈಟ್ ವೈಟ್ ಆಂಟಿಕ್ ಕಲೆಕ್ಷನ್, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು, ಗ್ರಾಹಕರು ಆರಾಮದಾಯಕವಾಗಿ ಖರೀದಿ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಸಂಸ್ಥೆಯು ಸುಳ್ಯ. ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದೆ. ಆಟಿ ಸೇಲ್ ಹಾಗೂ ಆಷಾಡ ಸೇಲ್ ಆಫರ್ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version