Published
7 months agoon
By
Akkare News
ಪುತ್ತೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಪುತ್ತೂರು ನಗರ ಠಾಣಾ ಅಕ್ರ 69/2023 ಕಲ:379 ಐ.ಪಿ.ಸಿ ಪ್ರಕರಣದಲ್ಲಿ 9 ಬಾರಿ ವಾರಂಟ್ ಜಾರಿಯಾಗಿದ್ದರೂ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾವೇರಿ, ಸವಣೂರು ನಿವಾಸಿ ಶಿವಕುಮಾರ್ (ಶಿವು) ಎಂಬಾತನನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ರವರು ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ಕೌಶಿಕ್ ರವರ ನೇತೃತ್ವದ, ಸಿಬ್ಬಂದಿಗಳಾದ ಸಿ ಹೆಚ್ ಸಿ ಪ್ರಶಾಂತ ರೈ, ಸಿಹೆಚ್ ಸಿ ಗಣೇಶ ಎನ್, ಸಿಪಿಸಿ ಶ್ರೀಶೈಲ ಎಂ.ಕೆ, ಸಿಪಿಸಿ ಮಹಮ್ಮದ್ ಮೌಲಾನಾ ಅವರನ್ನು ಒಳಗೊಂಡ ವಿಶೇಷ ತಂಡವು ಆ.12 ರಂದು ಬೆಂಗಳೂರಿನ ಅಬ್ಬಿಗೆರೆ ಎಂಬಲ್ಲಿ ದಸ್ತಗಿರಿ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ (ಕಲ್ಲು ಮಾಮು) ಎಂಬಾತನನ್ನು, ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ವೃತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣಾ CHC -826 ಶಿವರಾಮ ರೈ ಮತ್ತು ಡಿವೈಎಸ್ಪಿ ವಿಶೇಷ ತಂಡದ ಸಿಬ್ಬಂದಿಗಳಾದ ಸಿಪಿಸಿ ಶಾಂತಕುಮಾರ್, ಸಿಪಿಸಿ ರವಿಕುಮಾರ್, ಸಿಪಿಸಿ ರಮೇಶ್ ಅವರನ್ನು ಒಳಗೊಂಡ ತಂಡವು ದಸ್ತಗಿರಿ ಮಾಡಿದೆ. ಸಯ್ಯದ್ ಕಲೀಂ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿರುತ್ತದೆ.




ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ:
341,323,324,504,506 R/w 34 ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು, ಕಡಬ ಠಾಣಾ ಪೊಲೀಸರು ಆ.12 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ

‘







