Connect with us

ಇತ್ತೀಚಿನ ಸುದ್ದಿಗಳು

ಭಾರತ್ ಕೋ.ಅಪ್ರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಪುತ್ತೂರು ಶಾಖೆಯಲ್ಲಿ 47ನೇ ವರ್ಷದ ಫೌಂಡೇಶನ್ ಡೇ.

Published

on

47ನೇ ವರ್ಷದ ಆಚರಣೆಯ ಅಂಗವಾಗಿ ನಿವೃತ್ತ ಪ್ರೊಫೆಸರ್ ಶ್ರೀ ಗೋವಿಂದ ಭಟ್ ಇವರು ದೀಪ ಬೆಳಗಿಸಿ ಕೇಕ್ ಕತ್ತರಿಸಿದರು.
ಪ್ರಸ್ತುತ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ಸಂತೃಪ್ತಿ ಗೊಳಿಸುವಲ್ಲಿ ಸಿಬ್ಬಂದಿಗಳ ಸೇವೆ ಶ್ಲಾಘನೀಯ ಎಂದರು ಅದೇ ರೀತಿ ಬ್ಯಾಂಕಿಂಗ್ ಮೂಲಕ ನಡೆಯುವ ಫ್ರಾಡ್ ಕೆಲಸಗಳ ಬಗ್ಗೆ ಅನಾಮಿಕ ಕರೆಗಳ ಬಗ್ಗೆ ಜಾಗೃತಿ ವಹಿಸುವುದು ಸೂಕ್ತ ಎಂದರು.

ಪುತ್ತೂರು ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಭಾರತ್ ಬ್ಯಾಂಕಿನ ಸೇವೆ ಗ್ರಾಹಕರ ಮನಮುಟ್ಟುವಲ್ಲಿ ಸಹಕಾರಿಯಾಗಿದ್ದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಮೂರ್ತೆ ದಾರ ಸೇವಾ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ಆರ್ ಸಿ ನಾರಾಯಣ್ ಇವರು ಬ್ಯಾಂಕಿನ ಕಾರ್ಯ ಸಾಧನೆ ಹಾಗೂ ನಗುಮುಖದ ಸಿಬ್ಬಂದಿಗಳ ಸೇವೆ ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಮುನ್ನಡೆಯುವಲ್ಲಿ ಭಾರತ್ ಬ್ಯಾಂಕಿನ ಸ್ಪಂದನೆ ಹಾಗೂ ಭಾರತೀಯ ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳುವಳ್ಳಿ ಬ್ಯಾಂಕಿನ ಸೇವೆ ಮಹತ್ತರವಾದುದು. 47 ವರ್ಷಾಚರಣೆ ಮಾಡಿದ ಸಂಸ್ಥೆ ಸಾವಿರಾರು ಶಾಖೆಗಳನ್ನು ಹೊಂದುವಂತಾಗಲಿ ನೂರಾರು ವರ್ಷ ನಿರಂತರ ಸೇವೆ ನೀಡುವಂತಾಗಲಿ ಈ ವರ್ಷದ ಧ್ಯೇಯದಂತೆ “”ಒನ್ ಟೀಮ್ ಒನ್ ಡ್ರೀಮ್ ಒನ್ ಬ್ಯಾಂಕ್””” ಗ್ರಾಹಕ ಸ್ನೇಹಿಯಾಗಿರಲಿ ಎಂದು ಶುಭ ಹಾರೈಸಿದರು.

ನಿವೃತ್ತ ಇಂಜಿನಿಯರ್ ಶ್ರೀ ಸತೀಶ್ ಕೆದಿಲಾಯ ಇವರು ಸಂಸ್ಥೆಯ ನಿಕಟ ಸಂಪರ್ಕದ ಬಗ್ಗೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಬ್ಯಾಂಕಿಂಗ್ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಅಕ್ಷಯ ಕಾಲೇಜ್ ಚೇರ್ಮನ್ ಜಯಂತ್ ನಡುಬೈಲ್ ಭಾರತ್ ಬ್ಯಾಂಕಿನ ಸೇವೆ ಹಾಗೂ ಗ್ರಾಹಕರೊಂದಿಗಿನ ಒಡನಾಟ ಉತ್ತಮ ಇದ್ದು ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಹೈಲ್ಯಾಂಡ್ ನ ಚೇರ್ಮನ್ ರಾಘವೇಂದ್ರ ಹೆಗ್ಡೆ ಉಪಸ್ಥಿತರಿದ್ದು ಸಂಸ್ಥೆಯ ಸೇವೆ ಒಳ್ಳೆಯದಿದ್ದು ಮುಂದಿನ ದಿನಗಳಲ್ಲಿಯೂ ಒಳ್ಳೆಯ ರೀತಿಯ ಸೇವೆ ನೀಡುವಂತಾಗಲಿ ಎಂದರು. ಕಾರ್ಯಕ್ರಮದಲ್ಲಿ ಗೀತಾ ಜಿ. ಭಟ್, ಅನಂತ ಪ್ರಭು, ನವೀನ್ ಶೆಟ್ಟಿ , ವಸಂತ್ ಕೋಟ್ಯಾನ್,ಚಂದ್ರಶೇಖರ್ ಪೂಜಾರಿ, ರಮೇಶ್ ಪೂಜಾರಿ, ಸ್ವಸ್ತಿಕ್ ಪದ್ಯಾಣ, ಪರಿವಾರ ಸೊಸೈಟಿ ಯ ಪ್ರಬಂಧಕ ಸುಧಾಕರ್,ಪ್ರೇಮಾನಂದ, ಮಾನಸ ಗಂಗಾ ಸೊಸೈಟಿ ಯ ಸುಭಾಶ್ಚಂದ್ರ, ಶ್ವೇತಾ ಕುಮಾರ್, ಹಾಗೂ ಶಾಖಾ ಸಿಬ್ಬಂದಿಗಳಾದ ಶ್ರೀಮತಿ ಸ್ವಾತಿ, ಶ್ರೀಮತಿ ಸ್ಮಿತಾ, ಶ್ರೀಮತಿ ಶ್ರುತಿ, ಶ್ರೀಮತಿ ಆರತಿ ಮತ್ತು ದೇವರಾಜ್ ಉಪಸ್ಥಿತರಿದ್ದು ಬ್ಯಾಂಕ್ ಶಾಖಾ ಪ್ರಬಂಧಕ ಸುಶಾಂತ್ ಪೂಜಾರಿ ಸ್ವಾಗತಿಸಿದರು. ಭಾಸ್ಕರ್ ಸರಪಾಡಿ ಧನ್ಯವಾದ ಗೈದರು. ಹರೀಶ ಶಾಂತಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version