Published
6 months agoon
By
Akkare News



ಆದ್ರೆ ಈ ಬಾರಿ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ತಿಮರೋಡಿ ಬಂದಿರುವುದಲ್ಲ, ಬದಲಾಗಿ ದೂರು ಕೊಡಲು ಬಂದಿದ್ದರು. ಏನು ಅ ದೂರು ಎಂಬ ಕುತೂಹಲ.
ಈಗಾಗಲೇ ಧರ್ಮಸ್ಥಳ ಕಾಡಿನಲ್ಲಿ ಅನಧಿಕೃತ ಶವ ಹೂತ ಪ್ರಕರಣದ ಆರೋಪ ಮಾಡಿ ಚಿನ್ನಯ್ಯ ಜೈಲುಪಾಲಾಗಿದ್ದಾನೆ. ಆದರೆ ಪ್ರಕರಣ ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ. ಧರ್ಮಸ್ಥಳದ ವಸತಿ ಗೃಹಗಳ ಮೇಲೂ ಈಗ ಆರೋಪ ಕೇಳಿಬಂದಿದ್ದು, ನಾಲ್ಕು ಮಂದಿ ಮೃತಪಟ್ಟವರ ವಿವರ ಸಹಿತ, ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರನ್ನು
ನೀಡಿದ್ದಾರೆ. ಇದರೊಂದಿಗೆ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಎಸ್‌ಐಟಿ ಈಗಾಗಲೇ ಗಿರೀರ್ಶ ಮಟ್ಟಣವರ್, ಟಿ ಜಯಂತ್, ವಿಠಲಗೌಡ ಹಾಗೂ ಪ್ರದೀಪ್ ಅವರ ನಿರಂತರ ವಿಚಾರಣೆ ನಡೆಸುತ್ತಿದೆ.











