Connect with us

ಇತರ

ಬ್ರೇಕಿಂಗ್ ನ್ಯೂಸ್ ರಾತ್ರೋರಾತ್ರಿ ಎಸ್‌ಐಟಿಗೆ ದಿಢೀರ್ ಭೇಟಿ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ

Published

on

ಬೆಳ್ತಂಗಡಿ : ಬಂಧನವಾಗಿ, ಜಾಮೀನಿನ ಮೇಲೆ ಹೊರಗೆ ಬಂದಿರುವ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗುರುವಾರ ರಾತ್ರಿ ದಿಢೀರ್ ಬೆಳ್ತಂಗಡಿಯ ಎಸ್‌ಐಟಿ ಕಚೇರಿ ಮುಂದೆ ಹಾಜರಾದರು.

ಆದ್ರೆ ಈ ಬಾರಿ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ತಿಮರೋಡಿ ಬಂದಿರುವುದಲ್ಲ, ಬದಲಾಗಿ ದೂರು ಕೊಡಲು ಬಂದಿದ್ದರು. ಏನು ಅ ದೂರು ಎಂಬ ಕುತೂಹಲ.
ಈಗಾಗಲೇ ಧರ್ಮಸ್ಥಳ ಕಾಡಿನಲ್ಲಿ ಅನಧಿಕೃತ ಶವ ಹೂತ ಪ್ರಕರಣದ ಆರೋಪ ಮಾಡಿ ಚಿನ್ನಯ್ಯ ಜೈಲುಪಾಲಾಗಿದ್ದಾನೆ. ಆದರೆ ಪ್ರಕರಣ ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ. ಧರ್ಮಸ್ಥಳದ ವಸತಿ ಗೃಹಗಳ ಮೇಲೂ ಈಗ ಆರೋಪ ಕೇಳಿಬಂದಿದ್ದು, ನಾಲ್ಕು ಮಂದಿ ಮೃತಪಟ್ಟವರ ವಿವರ ಸಹಿತ, ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರನ್ನು
ನೀಡಿದ್ದಾರೆ. ಇದರೊಂದಿಗೆ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಎಸ್‌ಐಟಿ ಈಗಾಗಲೇ ಗಿರೀರ್ಶ ಮಟ್ಟಣವರ್, ಟಿ ಜಯಂತ್, ವಿಠಲಗೌಡ ಹಾಗೂ ಪ್ರದೀಪ್ ಅವರ ನಿರಂತರ ವಿಚಾರಣೆ ನಡೆಸುತ್ತಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version