Connect with us

ಇತರ

ಪುತ್ತೂರು – ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವು

Published

on

ಪುತ್ತೂರು ಅಕ್ಟೋಬರ್ 11: ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ಶಾಲಾ ವಿಧ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ನಿನ್ನೆ ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ನಡೆದಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ.

ಮೃತರನ್ನು ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಇಶಾ (7ವ) ಎಂದು ಗುರುತಿಸಲಾಗಿದೆ. ಅಕ್ಟೋಬರ್ 10 ರಂದು ಸಂಜೆ ವಿದ್ಯಾರ್ಥಿಗಳಾದ ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಇಶಾ (7ವ) ಮತ್ತು ಕಿಶೋರ್ ಎಂಬವರ ಪುತ್ರ ಪ್ರತ್ಯೂಶ್(10 ವ) ಮತ್ತು ಸ್ಥಳೀಯ ನಾರಾಯಣ್ (40ವ) ಹೆಜ್ಜೇನು ದಾಳಿಗೊಳಗಾದವರು. ವಿದ್ಯಾರ್ಥಿಗಳಿಬ್ಬರು ಸಂಜೆ ಮನೆಗೆ ತೆರಳುತ್ತಿದ್ದಾಗ ಕೂಟೇಲು ಸಮೀಪ ಹೆಜ್ಜೇನುಗಳು ಏಕಾ ಏಕಿ ವಿದ್ಯಾರ್ಥಿಗಳಿಬ್ಬರ ಮೇಲೆ ದಾಳಿ ಮಾಡಿದೆ.

ವಿದ್ಯಾರ್ಥಿಗಳು‌ ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ವಿದ್ಯಾರ್ಥಿಗಳ ರಕ್ಷಣೆಗೆ ಬಂದಿದ್ದರು. ಈ ವೇಳೆ ಹೆಜ್ಜೇನು ಅವರಿಗೂ ಕಚ್ಚಿದೆ. ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ಇಶಾ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ. ಇನ್ನೊಬ್ಬ ಬಾಲಕನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದ್ದು, ಚಿಕಿತ್ಸೆ ಮುಂದುವರೆದಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement