Published
4 months agoon
By
Akkare News
ಪತ್ತನಂತಿಟ್ಟ: ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹ 6.12ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಶಬರಿಮಲೆ ತೀರ್ಥಯಾತ್ರೆ ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಘೋಷಣೆ ಹೊರಬಿದ್ದಿದ್ದು, ಸ್ಥಳೀಯರು ಹಾಗೂ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ನಿಲಕ್ಕಲ್ನಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನೀಡಿದ ಭೂಮಿಯಲ್ಲಿ ಸುಮಾರು ₹ 6.12 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ವೀಣಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಿಲಕ್ಕಲ್ಗೆ ಭೇಟಿ ನೀಡುವ ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯ ಭಾಗವಾಗಿ ಶಬರಿಮಲೆ ಬೇಸ್ ಕ್ಯಾಂಪ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ’ ಎಂದು ಜಾರ್ಜ್ ಹೇಳಿದ್ದಾರೆ .ಜೊತೆಗೆ ಮಂಗಳವಾರ ಆಸ್ಪತ್ರೆಯ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಟ್ಟು 10,700 ಚದರ ಅಡಿ ವಿಸ್ತೀರ್ಣದ ಈ ಕಟ್ಟಡ ಹೊರ ರೋಗಿಗಳಿಗೆ (ಒಪಿಡಿ) ಮೂರು ಕೊಠಡಿಗಳು, ತುರ್ತು ವಿಭಾಗ, ದಾದಿಯರ ಕೇಂದ್ರ, ಇಸಿಜಿ ಕೊಠಡಿ, ಐಸಿಯು ಮತ್ತು ಔಷಧಾಲಯದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ.
ಮೊದಲ ಮಹಡಿಯಲ್ಲಿ ಎಕ್ಸ್-ರೇ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ ಇರಲಿದೆ. ಉದ್ಘಾಟನಾ ಸಮಾರಂಭವು ನಿಲಕ್ಕಲ್ ದೇವಾಲಯದ ಬಳಿ ನಡೆಯಲಿದೆ ಎಂದು ಹೇಳಲಾಗಿದೆ.


ಒಟ್ಟಿನಲ್ಲಿ, ಈ MUTS ಸಹಾಯಕ್ನಿಂದ ಪ್ರಯಾಣಿಕರು ಟಿಕೆಟ್ ಖರೀದಿಸಲು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುವುದರಲ್ಲಿ ಅನುಮಾನ ಇಲ್ಲ.



