Published
4 months agoon
By
Akkare News
ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 14.11.2025 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮೈಸೂರಿನ ಜಾವಾ ರೋಟರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಬೇಬಿ ಸೋನಿಕ ಜನಾರ್ಧನ್ ಇವರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ರೋಟರಿ ಕ್ಲಬ್ ಸೆಂಟ್ರಲ್ ನ ಅಧ್ಯಕ್ಷರಾದ ರೊಟೇರಿಯನ್ ಚಂದ್ರಹಾಸ ರೈ ರವರು ಮಾತನಾಡಿ ಶೈಕ್ಷಣಿಕವಾಗಿ ,ಭೌತಿಕವಾಗಿ ಪಂಚಾಂಗವನ್ನು ಹಾಕಿ ಕೊಟ್ಟನಾಯಕ ಜವಹರಲಾಲ್ ನೆಹರು ರವರ ಬಗ್ಗೆ ಮತ್ತು ಅವರಿಗಿರುವ ಮಕ್ಕಳ ಮೇಲಿನ ಪ್ರೀತಿಯ ಬಗ್ಗೆ ತಿಳಿಸಿದರು.ಮಕ್ಕಳ ಸಕಾರಾತ್ಮಕ ಭವಿಷ್ಯದ ವರ್ತನೆಯ ಬಗ್ಗೆ ಶಿಕ್ಷಕರಷ್ಟೇ ಪೋಷಕರ ಜವಾಬ್ದಾರಿ ಇದೆ ಎಂಬುದನ್ನು ಮನದಟ್ಟು ಮಾಡಿದರು. ಎವಿಜಿ ಶಾಲೆಯ ವ್ಯವಸ್ಥೆಯ ಬಗ್ಗೆ , ಅದರ ಆರಂಭದ ಹೆಜ್ಜೆಗಳು ಬಹಳ ಉತ್ತಮವಾಗಿದೆ , ಇಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು .ಮಕ್ಕಳಿಗೆ ಏಕಲವ್ಯನ ಕಥೆಯನ್ನು ತಿಳಿಸುವುದರ ಮೂಲಕ ಮಕ್ಕಳ ಜವಾಬ್ದಾರಿಯ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಶಾಲೆಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆ ಅವರು ಮಕ್ಕಳ ದಿನಾಚರಣೆ ಬಗ್ಗೆ ತಿಳಿಸಿ, ಭವಿಷ್ಯದ ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೇಬಿ ಸೋನಿಕ ಇವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲೆಯ ಸಂಚಾಲಕರಾದ ಶ್ರೀ ಎ ವಿ ನಾರಾಯಣ ,ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು, ಶಾಲಾ ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪ ಗೌಡ ಬಲ್ಯ , ಶಾಲೆಯ ನಿರ್ದೇಶಕರಾದ ಸೀತಾರಾಮ ಪೂಜಾರಿ ಮೇಲ್ಮಜಲು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಶ್ರೀ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಮರ ನಾಥ್ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಕವನ್ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೈಸೂರಿನ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀ ಜನಾರ್ಧನ ಬೆಟ್ಟಂಪಾಡಿ, ಬೇಬಿ ಸೋನಿಕ, ಕುಮಾರಿ ಕುಷಿತ ರವರ ಗಾನ ಮಾಧುರ್ಯ ಎಂಬ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು. ನವೆಂಬರ್ 14ರಂದು ಹುಟ್ಟಿದ ಈ ಶಾಲೆಯ ವಿದ್ಯಾರ್ಥಿಗಳಾದ ರೋಹಿತ್ ಪಿ ದೊಡ್ಡಮನಿ ಮತ್ತು ರುತ್ವಿಕ್. ಕೆ ಹುಟ್ಟುಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಮಕ್ಕಳ ದಿನಾಚರಣೆಗೆ ಸಂಬಂಧಿಸಿದಂತೆ ಕೆಲವೊಂದು ರಸಪ್ರಶ್ನೆಗಳನ್ನು ಕೇಳಿ ಅಲ್ಲಿಯೇ ಬಹುಮಾನವನ್ನು ವಿತರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಶಾಲೆಯ ನಿರ್ದೇಶಕರಾದ ಶ್ರೀ ಸೀತಾರಾಮ ಕೇವಳ, ಶ್ರೀಮತಿ ಪ್ರತಿಭಾ ದೇವಿ , ಪೋಷಕರು ,ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡರು.
ವಿದ್ಯಾರ್ಥಿನಿಯರಾದ ಚಾರ್ವಿ ,ವಿಭ ಆರುಶಿ ರವರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಶ್ರೀಮತಿ ಸವಿತಾ ಕುಮಾರಿ ಬಹುಮಾನ ಪಟ್ಟಿಯನ್ನು ವಾಚಿಸಿ , ಕುಮಾರಿ ಪ್ರಕ್ಷುತ ರಸಪ್ರಶ್ನೆಯ ಯನ್ನು ಕೇಳಿದರು.
ಕಾರ್ಯಕ್ರಮದಲ್ಲಿ ಮಾಸ್ಟರ್ ಅದ್ವಿಕ್ ಬಂಜನ್ ಸ್ವಾಗತಿಸಿ , ಕುಮಾರಿ ಎ.ಎನ್ ಜ್ಯೋಸ್ತ್ನ ಗೌಡ ವಂದನಾರ್ಪಣೆಗೈದು , ಮಾಸ್ಟರ್ ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.ಶಿಕ್ಷಕಿಯರಾದ ಶ್ರೀಮತಿ ಸುಚಿತ ಮತ್ತು ಹಿತಶ್ರೀ ಅತಿಥಿ ಪರಿಚಯ ಮಾಡಿ , ಮಾಸ್ಟರ್ ಗನ್ವಿತ್, ಕುಮಾರಿ ಅದ್ವಿತಿ ಬಂಜನ್ ಕಾರ್ಯಕ್ರಮವನ್ನು ನಿರೂಪಿಸಿದರು.






