Connect with us

ಇತರ

ಕೇರಳದಲ್ಲಿ ಸೋನಿಯಾ ಗಾಂಧಿಗೆ ಹೀನಾಯ ಸೋಲು, ಬಿಜೆಪಿಗೆ ಕೈ ಕೊಟ್ಟ ಅದೃಷ್ಟ!

Published

on

ಮುನ್ನಾರ್: ಇಂದು ಕೇರಳದಲ್ಲಿ ಅಧಿಕಾರದ ಸೆಮಿಫೈನಲ್ ಪಂದ್ಯದ ಫಲಿತಾಂಶ ಹೊರಬಿದ್ದಿದೆ. ಕೇರಳದಲ್ಲಿ ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಚ್ಚರಿಯ ರೀತಿಯಲ್ಲಿ ಅನೇಕ ಕಡೆಗಳಲ್ಲಿ ಗೆಲುವುಗಳನ್ನು ಕಂಡು ಎಡಪಕ್ಷಗಳಿಗೆ ಶಾಕ್ ನೀಡಿದೆ.

ಕೇರಳದ 1199 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೆ, ಬಿಜೆಪಿ ಕೂಡ ಅನೇಕ ಕಡೆಗಳಲ್ಲಿ ಅಧಿಕಾರದ ಗದ್ದುಗೆ ಏರಿದೆ. ಈತನ್ಮಧ್ಯೆ ಕಮಲದ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಎಂಬ ಮಹಿಳೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಹೆಸರಿನೊಂದಿಗೆ ಗಮನ ಸೆಳೆದ ಅಭ್ಯರ್ಥಿಯೂ ಆಗಿದ್ದ ಸೋನಿಯಾ ಗಾಂಧಿ ಅವರು ಈ ಬಾರಿ ತಮ್ಮ ಅದೃಷ್ಟದಾಟದಲ್ಲಿ ಸೋತಿದ್ದಾರೆ. ಮುನ್ನಾರ್ ಪಂಚಾಯತ್‌ನ 16 ನೇ ವಾರ್ಡ್‌ನಲ್ಲಿ ಸೋನಿಯಾ ಗಾಂಧಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಯುಡಿಎಫ್ ಅಭ್ಯರ್ಥಿ ಮಂಜುಳಾ ವಾರ್ಡ್ ಅನ್ನು ಗೆದ್ದಿದ್ದಾರೆ. ಚುನಾವಣೆಯಲ್ಲಿ ಸೋನಿಯಾ ಘಾಂಧೀ ಒಟ್ಟು 103 ಮತಗಳನ್ನು ಪಡೆದರು.

Continue Reading
Click to comment

Leave a Reply

Your email address will not be published. Required fields are marked *

Advertisement