Connect with us

ಇಂದಿನ ಕಾರ್ಯಕ್ರಮ

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವಜ್ರಭರಣಗಳ ವಾರ್ಷಿಕ ಮಹೋತ್ಸವ ಗ್ಲೋಫೆಸ್ಟ್ ಗೆ ಚಾಲನೆ

Published

on

ಪುತ್ತೂರು ನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಾರ್ಷಿಕ ವಜ್ರಾಭರಣಗಳ ವಿಶೇಷ ಉತ್ಸವ ‘ಗ್ಲೋ-ಫೆಸ್ಟ್’ಗೆ ಡಿ.15ರಂದು ಚಾಲನೆ ನೀಡಲಾಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ವಜ್ರಾಭರಣಗಳನ್ನು ಖರೀದಿಸುವುದು ಮತ್ತು ಧರಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ವಜ್ರವು ಕೇವಲ ಒಂದು ಕಲ್ಲಲ್ಲ; ಅದು ಶುದ್ಧತೆ, ಶಕ್ತಿ, ಪ್ರೇಮ ಮತ್ತು ವಿಶ್ವಾಸದ ಸಂಕೇತವಾಗಿದೆ. ಜಿ.ಎಲ್ ಆಚಾರ್ಯ ಸಂಸ್ಥೆಯು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು, ವೈವಿಧ್ಯಮಯ ವಿನ್ಯಾಸಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೈಜ ವಜ್ರಗಳಿಗೆ ಮಾತ್ರ ಆದ್ಯತೆ:
ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, “ಪ್ರಸ್ತುತ ಮಾರುಕಟ್ಟೆಯಲ್ಲಿ ನೈಜ ವಜ್ರಗಳು ಮತ್ತು ಲ್ಯಾಬ್ ತಯಾರಿತ ವಜ್ರಗಳು ಎಂಬ ಎರಡು ವಿಧಗಳಿವೆ. ಆದರೆ, ನಮ್ಮಲ್ಲಿ ಕೇವಲ ನೈಜ ವಜ್ರಗಳು ಮಾತ್ರ ಲಭ್ಯವಿವೆ. ಲ್ಯಾಬ್ ತಯಾರಿತ ವಜ್ರಗಳ ಬೆಲೆ ಕುಸಿಯುತ್ತಿದ್ದರೂ, ನೈಜ ವಜ್ರಗಳ ಮೌಲ್ಯವು ಸದಾ ಏರಿಕೆಯಾಗುತ್ತಲೇ ಇರುತ್ತದೆ. ಈ ಬಾರಿಯ ಉತ್ಸವದಲ್ಲಿ ಅತ್ಯುತ್ತಮ ವಜ್ರಾಭರಣಗಳ ಸಂಗ್ರಹದೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ,” ಎಂದು ತಿಳಿಸಿದರು.

ಗ್ಲೋ ಫೆಸ್ಟ್’ನ ವಿಶೇಷತೆಗಳೇನು?
ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ. 7000 ವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು, ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ.

ವಜ್ರಾಭರಣದ ಬೆಲೆ ರೂ. 2500ರಿಂದ ಪ್ರಾರಂಭವಾಗುತ್ತದೆ. ಗ್ಲೋ ವಜ್ರಾಭರಣಗಳು ಅಂತರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ್ಟ ಶ್ರೇಣಿಯ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಸಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ. 2600ಕ್ಕೂ ಮಿಕ್ಕಿದ ಡಿಸೈನ್ ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಮರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳು ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.

ಜೊತೆಗೆ ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪ್ರತಿಷ್ಠಿತ ಪ್ರಮಾಣೀಕೃತ ಏಜೆನ್ಸಿಗಳಿಂದ ಧೃಡೀಕರಣಗೊಂಡ ವಜ್ರಾಭರಣಗಳ ಶ್ರೇಣಿ. ಪ್ರಮಾಣೀಕೃತ ಇಎಫ್ ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ, ಮರುಖರೀದಿಯ ಗ್ಯಾರಂಟಿ, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳನ್ನು ತಮ್ಮದಾಗಿಸುವ ಸುವರ್ಣಾವಕಾಶವಿದೆ.

ಪ್ಲೋರ್ ಮ್ಯಾನೇಜರ್ ಬಾರ್ಗವ್ ಸ್ವಾಗತಿಸಿ, ವಂದಿಸಿದರು. ಶೋರೂಂ ಮ್ಯಾನೇಜರ್ ಶೇಖರ್ ಮತ್ತು ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಸಹಕರಿಸಿದರು. ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ತಿಂಗಳಲ್ಲಿ ವಜ್ರಾಭರಣಗಳ ಮಹೋತ್ಸವ ಗ್ಲೋ ಪೆಸ್ಟ್ ಆಯೋಜಿಸಲಾಗುತ್ತಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಿವಿಧ ವಿನ್ಯಾಸದ ವಜ್ರದ ಆಭರಣಗಳು ಮಳಿಗೆಯಲ್ಲಿ ಲಭ್ಯವಿದೆ. ಜೊತೆಗೆ ತರಬೇತಿ ಪಡೆದ ಸಿಬ್ಬಂದಿಗಳಿಂದ ವಜ್ರಾಭರಣಗಳ ಮಾಹಿತಿ ಅಭಿಯಾನವು ಗ್ಲೋ ಫೆಸ್ಟ್‌ನಲ್ಲಿದೆ. ಆ ಮೂಲಕ ಮಳಿಗೆಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಸಲಾಗುತ್ತಿದೆ. ಫೆಸ್ಟ್ ಮೂಲಕ ಗ್ರಾಹಕರಿಗೆ ಉತ್ತಮ ದರ ಹಾಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಿ.15ರಿಂದ ಪ್ರಾರಂಭಗೊಂಡು ಜ.15ರ ತನಕ ಗ್ಲೋ ಫೆಸ್ಟ್ ನಡೆಯಲಿದೆ. -ಬಲರಾಮ ಆಚಾರ್ಯ, ಚೆಯರ್‌ಮೆನ್ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್

Continue Reading
Click to comment

Leave a Reply

Your email address will not be published. Required fields are marked *

Advertisement