Published
3 months agoon
By
Akkare Newsದಾವಣಗೆರೆ: ದರ್ಶನ್ ಅವರು ಇಲ್ಲದೆ ಇದ್ದಾಗ ಕೆಲ ವ್ಯಕ್ತಿಗಳು ಅವರ ಹಾಗೂ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗದೇ ಶಾಂತಿಯುತವಾಗಿ ಇರಬೇಕು ಎಂದು ವಿಜಯಲಕ್ಷ್ಮಿ ದರ್ಶನ್ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

ಡೆವಿಲ್ ಸಿನಿಮಾ ಸಕ್ಸಸ್ ಆಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ದಾವಣಗೆರೆಗೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಡೆವಿಲ್ ಸಿನಿಮಾದ ನಟಿ ರಚನಾ ರೈ ಹಾಗೂ ಹಾಸ್ಯ ನಟ ಹುಲಿ ಕಾರ್ತಿಕ್ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಈ ವೇಳೆ ವಿಜಯಲಕ್ಷ್ಮಿ ಅಭಿಮಾನಿಗಳನ್ನು ಕುರಿತು ಮಾತನಾಡಿ, ಕೆಲವರು ದರ್ಶನ್ ಇಲ್ಲದೆ ಇರುವ ಸಂದರ್ಭದಲ್ಲಿ ಅವರ ಬಗ್ಗೆ ವೇದಿಕೆ ಮೇಲೆ ಹಾಗೂ ಚಾನಲ್ಗಳಲ್ಲಿ ಕುಳಿತು ಮಾತನಾಡುತ್ತಾರೆ. ಆದರೆ ಅವರು ಬೆಂಗಳೂರಲ್ಲಿ ಇದ್ದಾಗ ವ್ಯಕ್ತಿಗಳು ಅವರ ಇರುವಿಕೆಯನ್ನೇ ತೋರಿಸಲ್ಲ. ಆದ್ರೆ ದರ್ಶನ್ ಇಲ್ಲದ ವೇಳೆ ಮಾತನಾಡುತ್ತಿದ್ದಾರೆ. ಇಂತ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀವು ಉದ್ವೇಗಕ್ಕೆ ಒಳಗಾಗದೇ ಶಾಂತಿಯುತವಾಗಿ ಇರಬೇಕು” ಎಂದು ದರ್ಶನ್ ಅಭಿಮಾನಿಗಳಿಗೆ ಕರೆ ಕೊಟ್ಟರು.












