Connect with us

ಇತರ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಜಾಲ ಪತ್ತೆ ನಾಲ್ವರು ಆರೋಪಿಗಳ ಬಂಧನ

Published

on

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಹಾಗೂ ಮಾರಾಟ ನಡೆಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತೂರು ನಿವಾಸಿಗಳಾದ ಮೊಹಮ್ಮದ್ ಹರ್ಷದ್ (33), ಮಹಮ್ಮದ್ ಆರೀಶ್ (31), ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46) ಹಾಗೂ ಆರೋಪಿಗಳಿಗೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಅಂದಾಜು ರೂ.50,000 ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, 0.87 ಗ್ರಾಂ ಗಾಂಜಾ, ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ರೂ.6 ಲಕ್ಷ ಮೌಲ್ಯದ ಎರಡು ಕಾರುಗಳು ಸೇರಿದಂತೆ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ.6.50 ಲಕ್ಷವಾಗಿದೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 24.01.2026ರಂದು ಅ.ಕ್ರ.ಸಂ.13/2026 ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 21(b) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 25(1B)(B) ರಂತೆ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕಿ ಸುಶ್ಮಾ ಭಂಡಾರಿ ಸೇರಿದಂತೆ ಸಿಬ್ಬಂದಿಗಳಾದ ಮುರುಗೇಶ್ ಪರಮೇಶ್ವರ, ಸತೀಶ್, ಸುಬ್ರಹ್ಮಣ್ಯ, ಹರೀಶ್, ನಾಗೇಶ್, ಭವಿತ್ ರೈ, ವಿನೋದ್, ನಾಗರಾಜ್, ಕಾರ್ತಿಕ್ ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ್, ಪ್ರಶಾಂತ ಎಂ., ಪ್ರವೀಣ್ ರೈ, ಪ್ರಶಾಂತ್ ರೈ, ಹರ್ಷಿತ್, ಸಂಪತ್ ಮತ್ತು ಸೋಕೋ ತಂಡದವರು ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement