Published
1 month agoon
By
Akkare News
ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು, ಇದರ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಐಕಳ ಕಂಬಳದಲ್ಲಿ ಜೂಜು ನಿಯಂತ್ರಣ ಹಾಗೂ ಸಮಯಪಾಲನೆಗೆ ಆದ್ಯತೆ ನೀಡಲಾಗುವುದು ಎಂದು ಕಂಬಳ ಅಸೋಸಿಯೇಶನ್ ಮತ್ತು ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.


ಫೆ.3ರಿಂದ 8ರವರೆಗೆ ನಿರಂತರ ಕಂಬಳೋತ್ಸವ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. 6ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ನಡೆಯಲಿದೆ. ಫೆ.7ರಂದು ಬೆಳಗ್ಗೆ 8ಕ್ಕೆ ಕರೆಮುಹೂರ್ತ ನಡೆಯಲಿದ್ದು, ಕೋಣಗಳು ಕರೆಗೆ ಇಳಿಯಲಿದೆ. ಬೆಳಗ್ಗೆ 9:30ಕ್ಕೆ ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರಿಗೆ ಕಂಬಳ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕಂಬಳದಲ್ಲಿ ಎಲ್ಲ ಕೋಣಗಳ ಯಜಮಾನರನ್ನು ವಿಶೇಷವಾಗಿ ಗೌರವಿಸಲಾಗುವುದು. ವಿಜೇತ ಕೋಣಗಳಿಗೆ ಚಿನ್ನದೊಂದಿಗೆ ನಗದು ಬಹುಮಾನ ನೀಡಲಾಗುವುದು. ಸೆಮಿಫೈನಲ್‌ಗೆ ಬಂದಿರುವ ಎಲ್ಲ ಕೋಣಗಳಿಗೆ ವಿಶೇಷ ಬಹುಮಾನವಿದೆ. ಕನಹಲಗೆ ವಿಭಾಗದಲ್ಲಿ ಭಾಗವಹಿಸುವ ವಿಜೇತ ಕೋಣಗಳಿಗೆ ಚಿನ್ನದೊಂದಿಗೆ ಎಲ್ಲಾ ಕೋಣದ ಯಜಮಾನರಿಗೂ ವಿಶೇಷ ಬಹುಮಾನ, ನಗದು ಪುರಸ್ಕಾರವಿದೆ ಎಂದರು.






