Connect with us

ಇತರ

ಗ್ರಾಮಪಂಚಾಯತ್ ಭ್ರಷ್ಟಾಚಾರದ ವಿರುದ್ಧ ಕಾಮನ್ ಮ್ಯಾನ್ ಹೋರಾಟ…9 ವರ್ಷಗಳ ಬಳಿಕ‌ ನ್ಯಾಯಾಲಯದಲ್ಲಿ ಸಿಕ್ಕ ಜಯ

Published

on

ಮಂಗಳೂರು ಫೆಬ್ರವರಿ 06: ಗ್ರಾಮಪಂಚಾಯತ್ ನಲ್ಲಿ ನಡೆದ ಅವ್ಯವಹಾರವನ್ನು ಪ್ರಶ್ನಿಸಿದ್ದ ಕಾರಣಕ್ಕೆ ಆ ವ್ಯಕ್ತಿಯ ಮೇಲೆ ಇಡೀ ಪಂಚಾಯತ್ ಆಡಳಿತವೇ ತಿರುಗಿ ಬಿದ್ದು, ಬಳಿಕ ಆತನ ಜೀವನವನ್ನೆ ನರಕ ಮಾಡಲು ಹೋರಟಿದ್ದ ಆಡಳಿತದ ವಿರುದ್ದವೇ ವ್ಯಕ್ತಿಯೊಬ್ಬ ನಿರಂತರ ಹೋರಾಟ ನಡೆಸಿ ಕಾನೂನಿನ ಮೂಲಕವೇ ಹೋರಾಡಿ ಇಂದು ಗೆದ್ದು ಬೀಗಿದ್ದಾರೆ. ಕಳೆದ ಒಂಬತ್ತು ವರ್ಷಗಳ ಹೋರಾಟ ನಡೆಸಿ ಸಾಮಾನ್ಯ ಮನುಷ್ಯನೊಬ್ಬ ನ್ಯಾಯಾಲಯದಲ್ಲಿ ಗೆಲವು ಸಾಧಿಸಿದ್ದಾನೆ.

ಏನಿದು ಪ್ರಕರಣ ಇದು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಗ್ರಾಮಪಂಚಾಯತ್ ನ ಮಲೆಕೆರ್ಚಿ ಎನ್ನುವ ಪ್ರದೇಶದ ನಿವಾಸಿ ರುಕ್ಮಯ್ಯ ಗೌಡರ ಜೀವನದಲ್ಲಿ ನಡೆದ ನಿಜ ಕಥೆ. ಘಟನೆ ನಡೆದಿರೋದು 2016 ರಂದು. ಅಂದು ಕಾಣಿಯೂರು ಗ್ರಾಮಪಂಚಾಯತ್ ನಲ್ಲಿ ಆಡಳಿತ ನಡೆಸುತ್ತಿದ್ದ ಆಡಳಿತ ಮಂಡಳಿ ಅವ್ಯವಹಾರ ನಡೆಸಿದೆ ಮತ್ತು ಈ ಅವ್ಯವಹಾರದಲ್ಲಿ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿನಿ ಶೆಟ್ಟಿ ಮತ್ತು ಉಪಾಧ್ಯಕ್ಷೆ ಕಮಲಾಕ್ಷಿ ಹಾಗು ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ರುಕ್ಮಯ್ಯ ಗೌಡರು ಲೋಕಾಯುಕ್ತಕ್ಕೆ ನೀಡಿದ್ದರು.

ದೂರಿನಲ್ಲಿ ಸತ್ಯಾಂಶ ಇದೆ ಎಂದು ಮನವರಿಕೆ ಮಾಡಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಸ್ಥಳ ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಇದರಿಂದ ಕೆರಳಿದ ಪಂಚಾಯತ್ ಆಡಳಿತ ಮಂಡಳಿ 19.12.2016 ರಂದು ರುಕ್ಮಯ್ಯ ಗೌಡರು ಕುಡಿಯಲು ಬಳಸುತ್ತಿದ್ದ ಬೋರ್ ವೆಲ್ ಪಂಪನ್ನು ಅಕ್ರಮವಾಗೊ ತೆಗೆದು ಪಂಚಾಯತ್ ಕಛೇರಿಯಲ್ಲಿ ಇಟ್ಟಿದ್ದರು. ಅಲ್ಲದೆ ರುಕ್ಮಯ್ಯ ಗೌಡ ಮತ್ತು ಅವರ ಪತ್ನಿ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಎರಡು ಪ್ರಕರಣವನ್ನು ದಾಖಲಿಸಿ ಜೈಲಿಗಟ್ಟುವ ಷಡ್ಯಂತ್ರ ಮಾಡಿದ್ದರು. ಅಂದಿನಿಂದ ರುಕ್ಮಯ್ಯ ಗೌಡರ ಏಕವ್ಯಕ್ತಿ ಹೋರಾಟ ಆರಂಭಗೊಂಡಿತ್ತು. ಪಂಚಾಯತ್ ಆಡಳಿತ ಮಂಡಳಿ ರುಕ್ಮಯ್ಯ ಗೌಡ ಮತ್ತು ಅವರ ಪತ್ನಿ ವಿರುದ್ಧ ನೀಡಿದ್ದ ಕ್ರಿಮಿನಲ್ ಪ್ರಕರಣಕ್ಕಾಗಿ ಸುಮಾರು 9 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದಾರೆ. ತಮ್ಮ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ದ್ವೇಷದಿಂದ ದಾಖಲಾದ ಪ್ರಕರಣ ಎಂದು ಮನಗಂಡ ನ್ಯಾಯಾಲಯ ಇಬ್ಬರನ್ನೂ ಆರೋಪ ಮುಕ್ತಗೊಳಿಸಿದೆ.

ಸುಮಾರು 9 ವರ್ಷಗಳಿಂದ ಏಕವ್ಯಕ್ತಿಯಾಗಿ ಹೋರಾಟ ನಡೆಸಿದ್ದ ರುಕ್ಮಯ್ಯ ಗೌಡರಿಗೆ ಇದೀಗ ನ್ಯಾಯ ದೊರೆತಿದ್ದು, ಅವ್ಯವಹಾರದ ಪ್ರಕರಣವೂ ಇದೀಗ ಬೆಂಗಳೂರಿನಲ್ಲಿ ವಿಚಾರಣೆ ಹಂತದಲ್ಲಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ ತನಗೆ ಆದ ಅನ್ಯಾಯಗಳನ್ನು ರುಕ್ಮಯ್ಯ ಗೌಡ ಇದೀಗ ಸಾರ್ವಜನಿಕರಿಗೆ ತಿಳಿಸಲು ಮುಂದಾಗಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement