Connect with us

ಇತರ

ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ

Published

on

ಕೆಡ್ಡಸವು ತುಳು ಮಾಸದ ಮಾಯಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಆದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸುತ್ತಾರೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಭೂಮಿತಾಯಿ ಮದುವೆಯಾಗಿ ಹೊರ ಹೋಗಿ ಪ್ರಕೃತಿ ಫಲ ಕೊಡುತ್ತಾಳೆ ಎಂಬುವುದು ಹಿರಿಯರ ನಂಬಿಕೆ. ಆ ನಂಬಿಕೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಈ ದಿನಗಳಲ್ಲಿ ಭೂಮಿಗೆ ಗಾಯವಾಗುವಂತೆ ಹಾರೆ, ಪಿಕ್ಕಾಸಿನಂತ ವಸ್ತುಗಳಿಂದ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದುದರಿಂದ ಈ ದಿನ ವ್ಯವಸಾಯದ ಕೆಲಸವನ್ನು ಯಾರು ಮಾಡುವುದಿಲ್ಲ.

ಕೆಡ್ಡಸದ 3ನೇ ದಿವಸದಂದು ಮುಂಜಾನೆ ಮನೆಯ ಸುತ್ತಾ ಶುಚಿ ಮಾಡಿ ತುಳಸಿ ಕಟ್ಟೆಯ ಮುಂದೆ ಹಾಗೂ ಅಂಗಳಕ್ಕೆ ಸೆಗಣಿ ಸಾರಿಸಿ, ಮಸಿ ತುಂಡು, ಸರೋಳಿ ಎಲೆ, ಮಾವಿನ ಎಲೆ, ತೆಂಗಿನಕಾಯಿ, ನನ್ನೆರಿ, ಬಾಳೆಹಣ್ಣು ಜೊತೆಗೆಕತ್ತಿ ಹಾಗೂ ಒಂದು ಚೊಂಬು ಇಟ್ಟು ನೊರೆಕಾಯಿ, ಸೀಗೆಕಾಯಿ ಹಾಗೂ 5 ವೀಳ್ಯದೆಲೆ, ಆಡಿಕೆ, ಪೊರಕೆ ಇಡುವ ಕ್ರಮ ಇದೆ. ಇದಾದ ನಂತರ ಮನೆಯ ಯಜಮಾನಿ ಒಂದು ಪಾತ್ರೆಯಲ್ಲಿ ಎಣ್ಣೆ ತಂದು ಭೂಮಿಗೆ ಬಿಟ್ಟು ಸಂಜೆಯವರೆಗೆ ಅದನ್ನು ಅಲ್ಲೇ ಬಿಡುವ ಕ್ರಮ ಈಗಲೂ ಇದೆ.

ಕೆಡ್ಡಸದಂದು ಕುಡು ಅರಿತ ಯಾರಿಸುವ ಕ್ರಮ ಇದೆ. ಇದನ್ನು ಕುಚಲಕ್ಕಿಯನ್ನು ಹುರಿದು ಹುಡಿ ಮಾಡಿ, ತುರಿದ ತೆಂಗಿನಕಾಯಿ, ಬೆಲ್ಲ, ಹೆಸರು ಕಾಳು, ಮಂತೆ, ಹುರುಳಿ, ಕಡಲೆ ಕಾಯಿ ಹಾಗೂ ತುಪ್ಪ ಮಿಶ್ರಣ ಮಾಡುವುದೇ ಕುಡು ಅರಿ. ಇದನ್ನು ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ತುಂಬಾ ಇಷ್ಟ ಪಡುತ್ತಾರೆ. ಕುಡುವರಿಯನ್ನು ವಾರಗಟ್ಟಲೆ ಇಟ್ಟು ತಿನ್ನಬಹುದು. ಕೆಲವು ಕಡೆ ಮನೆಯಲ್ಲಿ ನುಗ್ಗೆ, ಬದನೆ ಸಾಂಬರ್ ಮಾಡುವ ಪದ್ಧತಿ ಈಗಲೂ ಇದೆ.

ಕೆಡ್ಡಸ

ಕೆಡ್ಡಸಕ್ಕೆ ಪುಂಡದೆ ಗಿಡವುನ ಕ್ರಮ ಪುಂಡದೆ ಹಕ್ಕಿಯನ್ನು ಊರಿನ ಯುವಕರೆಲ್ಲರೂ ಒಟ್ಟು ಸೇರಿ ಪುಂಡದೆ ಹಕ್ಕಿಯನ್ನು ಓಡಿಸಿಕೊಂಡು ಹೋಗಿ ಹಿಡಿಯುವ ಕ್ರಮ ಇದೆ. ಇದು ಈಗಲೂ ನಡೆಯುತ್ತಾ ಬಂದಿದೆ. ಸಿಕ್ಕಿದ ಪುಂಡದೆ ಹಕ್ಕಿಯನ್ನು ಸಂಜೆ ಪದಾರ್ಥ ಮಾಡಿ ಹಂಚಿ ತಿನ್ನುವ ಕ್ರಮ ಈಗಲೂ ಇದೆ.

1.ಶುರುಕೆಡ್ಡಸ (ಮೊದಲ ದಿನ):

ಮನೆಗಳ ಸುತ್ತಮುತ್ತ, ಅಂಗಳ ಸ್ವಚ್ಛಗೊಳಿಸಿ, ಸೆಗಣಿ ಸಾರಿ, ತುಳಸಿ ಕಟ್ಟೆಯ ಮುಂದೆ ಭೂಮಿ ಪೂಜೆ ಮಾಡಿ ಕುಡು ಅರಿತ ಯಾರಿಸುವ ಕ್ರಮ ಇದೆ.

2.ನಡು ಕೆಡ್ಡಸ (ಮಧ್ಯದ ದಿನ): ಈ ದಿನ ಬೇಟೆ ಆಡುವ ಕ್ರಮ ಇದೆ. ವಿಶೇಷವಾಗಿ ಪುಂಡದೆ ಹಕ್ಕಿ ಬೇಟೆ ನಡೆಯುತ್ತದೆ. ನಂತರ ಎಲ್ಲಾರೂ ಸೇರಿ ಪುಂಡದೆ ಹಕ್ಕಿಯ ಪಲ್ಯದೊಂದಿಗೆ ಅಡುಗೆ ಮಾಡಿ ಅದನ್ನು ತಿನ್ನುತ್ತಾರೆ.

3.ಕಡೆ ಕೆಡ್ಡಸ (ಕೊನೆಯ ದಿನ): ಮುತ್ತೈದೆಯರು ಭೂದೇವಿಗೆ ಸ್ನಾನ ಮಾಡಿಸುವ ಪಾಲಿಸುತ್ತಾರೆ. ವಿಧಿ-ವಿಧಾನಗಳನ್ನು ಇದಕ್ಕಾಗಿ ಎಲೆಗಳು, ಎಣ್ಣೆ, ಸೀಗೆಕಾಯಿ ಮುಂತಾದವುಗಳನ್ನು ಇಡುವ ಕ್ರಮ ಇತ್ತು.

ಕೆಡ್ಡಸದ ಸಮಯದಲ್ಲಿ ಹಿತಕರವಾದ ಸಮಶೀತೋಷ್ಣ ಗಾಳಿಗೆ ಕೆಡ್ಡಸದ ಗಾಳಿ ಎಂದು ಹೇಳುತ್ತಾರೆ. ಇದು ಭೂಮಿ ಪುಳಕಿತಗೊಳ್ಳುವ

ತುಳುನಾಡಿನ ಆಚರಣೆ ಎಂದರೆ ಅದರಲ್ಲಿ ಕ್ರಮನಿಬಂಧನೆಗಳು ಒಂದಿಷ್ಟು ಭಿನ್ನವಾಗಬಹುದು, ವಿಶೇಷತೆಯಿಂದ ಕೂಡಿರುತ್ತದೆ. ತುಳುನಾಡಿನಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಭೂತಾಯಿಯ ಋತುಸ್ರಾವವನ್ನು ಸಂಭ್ರಮಿಸುವುದು ಇಲ್ಲಿಯ ವಿಶೇಷ ಆಚರಣೆಯಲ್ಲಿ ಒಂದಾಗಿದೆ. ಈ ಮೂರು ದಿನಗಳಲ್ಲಿ ಪ್ರಕೃತಿಗೆ ಯಾವ ರೀತಿಯಲ್ಲಿ ಹಾನಿ ಮಾಡಬಾರದೆಂದು ನಿಯಮವೂ ಇದೆ. ಹಿಂದಿನ ಕಾಲದಲ್ಲಿ ಮನೆ ಹುಡುಗಿ ದೊಡ್ಡವಳಾದಲೆಂದು ಮನೆಯವರೆಲ್ಲ ಸಂಭ್ರಮಿಸುವುದು ಕ್ರಮ ಇತ್ತು. ಆ ದಿನ ಆ ಹುಡುಗಿಗೆ ಹೊಸ ಸೀರೆ ಉಡಿಸಿ ಹರ್ಷ ಪಡುವುದು ತುಳುನಾಡಿನ ಜನರಲ್ಲಿ ಇತ್ತು. ಊರಿನವರಿಗೆಲ್ಲಾ ಒಳ್ಳೆಯ ಊಟ ಕೊಡುತ್ತಿದ್ದರು.

ಸಂಕೇತ ಎಂದು ನಂಬುತ್ತಾರೆ. ಈಗಲೂ ಇದರ ಬಗ್ಗೆ ನಂಬಿಕೆ ಇದೆ. ಕಡೆಯಕೆಡ್ಡಸದ ಸಮಯದಲ್ಲಿ ಸಾರ್ನಡ್ಡೆ (ತುಳುನಾಡಿನ ಖಾದ್ಯ) ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಲಾಗುತ್ತದೆ. ಮುಂಜಾನೆ ತುಳಸಿ ಕಟ್ಟೆಯ ಸುತ್ತಾ ಹಸುವಿನ ಸಗಣಿಯನ್ನು ಸಾರಿಸಿ, ಸುತ್ತಲು ದೀಪ ಬೆಳಗಿಸುತ್ತಾರೆ. ಇದರ ಜೊತೆಗೆ ಕುಂಕುಮ, ಸೀಗೆಕಾಯಿಯನ್ನು ತುಳಸಿ ಕಟ್ಟೆಯ ಮುಂದೆ ಬಾಳೆ ಎಲೆಯಲ್ಲಿ ಇಡುತ್ತಾರೆ. ನಂತರ ಎಣ್ಣೆಯನ್ನು ಹೆಂಗಸರು ಮಣ್ಣಿಗೆ ಸುರಿಯುತ್ತಾರೆ. ಇದು ಭೂಮಿತಾಯಿಗೆ ಮಾಡುವ ಅಭಿಷೇಕ. ನಂತರ ಅವರೆಲ್ಲರೂ ಸ್ನಾನ ಮಾಡುತ್ತಾಳೆ.

Continue Reading
Click to comment

Leave a Reply

Your email address will not be published. Required fields are marked *

Advertisement