Connect with us

ಇತರ

ಬೆಳ್ತಂಗಡಿ: ರಾಜಕೇಸರಿ ಸೇವಾ ಟ್ರಸ್ಟ್‌ನ ಮಾನವೀಯ ಅಭಿಯಾನ – ಎಂಡೋಸಲ್ಫಾನ್ ಸಂತ್ರಸ್ತ ಮಗುವಿನ ಚಿಕಿತ್ಸೆಗಾಗಿ “ಪೆನ್ನು ಮಾರಾಟ ಮಾಡಿ ಹಣ ಸಂಗ್ರಹ”

Published

on

ಬೆಳ್ತಂಗಡಿ: ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಬೆಳ್ತಂಗಡಿಯ ರಾಜ ಕೇಸರಿ ಸೇವಾ ಟ್ರಸ್ಟ್ ತನ್ನ 584ನೇ ಸೇವಾ ಯೋಜನೆಗೆ ಚಾಲನೆ ನೀಡಿದೆ. ಎಂಡೋಸಲ್ಫಾನ್‌ನಿಂದ ಬಳಲುತ್ತಿರುವ ಪುಟ್ಟ ಮಗುವಿನ ಚಿಕಿತ್ಸೆಗಾಗಿ ಸಾರ್ವಜನಿಕರ ಸಹಕಾರ ಕೋರಿ ‘ಪೆನ್ನು ಮಾರಾಟ ಮಾಡುವ’ ವಿನೂತನ ಅಭಿಯಾನಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಬೆಳ್ತಂಗಡಿ ತಾಲೂಕು ಗರ್ಡಾಡಿ ನಿವಾಸಿಯಾದ ಉಮಾವತಿಯವರ 4ವರ್ಷದ ಮಗಳಾದ ಪ್ರಜ್ಞಾ ಕೆ. ಎಂಡೋಸಲ್ಫಾನಿಂದ ಬಳಲುತ್ತಿರುವ ಮಗುವಾಗಿದ್ದು ಈ ಮಗುವಿನ ಪ್ರತಿ ತಿಂಗಳ ಆರೋಗ್ಯದ ಚಿಕಿತ್ಸೆಯ ಸಹಾಯಕ್ಕಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪೆನ್ನು ಮಾರಾಟ ಮಾಡುವ ಅಭಿಯಾನಕ್ಕೆ ಸೇವ್ ಲೈಫ್ ಚಾರಿಟೇಬಲ್‌ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ರವರು ಚಾಲನೆ ನೀಡಿದರು. ಸಂಘಟನೆಯ ಸ್ಥಾಪಕಾಧ್ಯಕ್ಷ ದೀಪಕ್ ಜಿ ಬೆಳ್ತಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.ಸಂಘಟನೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement