Published
2 weeks agoon
By
Akkare News
ಕುಶಾಲನಗರ : ಕುಶಾಲನಗರ ಬಿ.ಎಂ. ರಸ್ತೆಯ ಸರಕಾರಿ ಮಾದರಿ ಶಾಲಾ ಮುಂಭಾಗದ ಕೆನರಾ ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆರವರ ಮಾಲಕತ್ವದ ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನ ಶಾಖೆ ಏ.8ರಂದು ಉದ್ಘಾಟನೆ ಗೊಂಡಿತು.
ಸಂಸ್ಥೆಯನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ವೆಂಕಟರಮಣ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಹಳಷ್ಟು ಸಂತಸವಾಗುತ್ತಿದೆ. ಅತೀ ಕಡಿಮೆ ಅವಧಿಯಲ್ಲಿ ಬಹಳಷ್ಟು ದೊಡ್ಡಮಟ್ಟದಲ್ಲಿ ಬೆಳೆದು ನಿಂತ ಸಂಸ್ಥೆ ಇದಾಗಿದೆ.ನಮ್ಮ ಬೆಳವಣಿಗೆಯಲ್ಲಿ ಹಿರಿಯರ ಸ್ಮರಣೆ ಅಗತ್ಯ ಎಲ್ಲರನ್ನೂ ಪ್ರೀತಿಯಿಂದ ಕಾಣುಔರು ದಿವಾಕರ ದಾಸ್. ವಿವಿದೋದ್ದೇಶ ಹೊಂದಿರುವ ವ್ಯಕ್ತಿ ಅವರು. ಒಂದಷ್ಟು ಮಂದಿಗೆ ಉದ್ಯೋಗ ಕಲ್ಪಿಸುವ ಕೆಲಸ ಅವರಿಂದ ಆಗುತ್ತಿದೆ. ಧಾನ ಧರ್ಮದ ಗುಣ ಯಶಸ್ಸಿನ ರಹದಾರಿ. ಇತರರಿಗೆ ಉದ್ಯೋಗ ಸೃಷ್ಟಿಯಾಗಲೆಂದು ಮಾಡಿರುವ ಸಂಸ್ಥೆಗೆ ಯಶಸ್ಸು ಹೆಚ್ಚು. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುವ ಒಳ್ಳೆಯ ಸಂಸ್ಥೆ ಇದಾಗಿದೆ. ಕನಿಷ್ಠ ಲಾಭ ಗರಿಷ್ಠ ಸೇವೆ ಎಂಬ ಧೈಯದೊಂದಿಗೆ ಸಂಸ್ಥೆಯ ಮಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಉದ್ಯಮ ಸದಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಅವರ ಕಾಯಕಕ್ಕೆ ನಿತ್ಯ ನಿರಂತರವಾಗಿ ಯಶಸ್ಸಾಗಲಿ ಎಂದರು.ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರು ಮಾತನಾಡಿ ಬೆಳೆಯುತ್ತಿರುವ ಕುಶಾಲನಗರಕ್ಕೆ ಎಸ್ ಎಲ್. ವಿ. ಯಂತಹ ಸಂಸ್ಥೆ ಅತೀ ಅವಶ್ಯಕ. ಈ ಸಂಸ್ಥೆಯ ಆರಂಭವಾದ್ದರಿಂದ ಈ ಭಾಗದ ಮಕ್ಕಳಿಗೆ ಬಹಳಷ್ಟು ಸಹಕಾರಿಯಾಗಲಿದೆ.ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಸಂಸ್ಥೆಯ ಬೆಳವಣಿಗೆಗೆ ಪೂರಕ. ನೂತನ ಮಳಿಗೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ಸಮಗ್ರ ಸಾಮಗ್ರಿಗಳ ಭರಪೂರ ಸಂಗ್ರಹವಿದೆ. ಇದರಿಂದ ನೆರೆಯ ಮೈಸೂರು ಮತ್ತಿತರ ಕಡೆಗಳಿಗೆ ತೆರಳುವ ಅನಿವಾರ್ಯತೆ ದೂರವಾಗಿದೆ.
ಕುಶಾಲನಗರ ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಇಂತಹ ಮಳಿಗೆ ಸ್ಥಾಪನೆಯಾಗಲಿ.ನಾವೆಲ್ಲರೂ ಈ ಸಂಸ್ಥೆಯಿಂದಲೇ ಪುಸ್ತಕ, ಆಟಿಕೆ, ಗಿಫ್ಟ್ ಐಟಂ ಗಳನ್ನು ಕೊಳ್ಳುವ ಮೂಲಕ ಅವರ ಬೆಳವಣಿಗೆಗೆ ಸಹಕರಿಸೋಣ ಎಂದರು.ಪ್ರಮುಖರಾದ ಪಿ. ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಶ್ರೀಧರ ಶೆಟ್ಟಿ ಗುಬ್ಯ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಅಳಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರೂಪೇಶ್ ರೈ ಅಳಿಕೆಗುತ್ತು, ಕಟ್ಟಡ ಮಾಲೀಕ ನರೇಂದ್ರನ್, ರಮೇಶ್ ಆಳ್ವಾ, ಚಂದ್ರಕಾಂತ್ ಬೆಂಗಳೂರು, ಕಾಂಗ್ರೆಸ್ ಮುಖಂಡ ಜಯರಾಂ ಮೈಸೂರು, ಯುವ ಉದ್ಯಮಿಗಳಾದ ತೌಸೀಫ್, ಫಹಾದ್ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಪ್ರಮುಖರಾದ ಯಶ್ ದೋಲ್ಪಾಡಿ, ಪೂರ್ಣಶ್ರೀ ರವೀಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಹಾಗೂ ಅವರ ಪತ್ನಿ ಹೇಮಾವತಿ ದಿವಾಕರ ದಾಸ್ ಮತ್ತು ರಾಮದಾಸ್ ಶೆಟ್ಟಿಯವರು ಬಂದ ಅತಿಥಿಗಳನ್ನು ಗೌರವದಿಂದ ಸ್ವಾಗತಿಸಿದರು.
ಸೂಪರ್‌ಮಾರ್ಕೆಟ್ ಮಾದರಿ ಔಟ್‌ಲೆಟ್:
‘ಎಸ್‌ಎಲ್‌ವಿ ಬುಕ್ ಹೌಸ್” ನ ಯಾವುದೇ ಔಟ್‌ಲೆಟ್‌ಗಳನ್ನು ಗಮನಿಸಿದರೆ ಅದು ಸೂಪರ್‌ಮಾರ್ಕೆಟ್ ಮಾದರಿಯಲ್ಲಿ ಗ್ರಾಹಕಸ್ನೇಹಿಯಾಗಿರುತ್ತವೆ. ಸೂಪರ್‌ಮಾರ್ಕೆಟ್ ರೀತಿಯಲ್ಲಿ ಗ್ರಾಹಕರು ಬಂದು ಅವರಿಗೆ ಬೇಕಿರುವ ವಸ್ತುಗಳನ್ನು ಅವರೇ ಆರಿಸಿ ಪಡೆದುಕೊಳ್ಳಬಹುದು. ಮಳಿಗೆಗಳಲ್ಲಿ ಸ್ಟೇಷನರಿ ಐಟಮ್ಸ್, ಟೆಕ್ ಬುಕ್ಸ್ ಗೈಡ್ಸ್, ನೋಟ್‌ಬುಕ್ಸ್ ಹೀಗೆ ಐಟಮ್‌ವಾರು ಶೆಲ್ ಗಳೆದ್ದು, ಪ್ರತೀ ಕೌಂಟರ್ ಬಳಿಯಲ್ಲೂ ಸಹಾಯಕರು ಗ್ರಾಹಕರಿಗೆ ಸಹಾಯ ಒದಗಿಸುತ್ತಾರೆ. ಸಂಸ್ಥೆಯ ಎಲ್ಲಾ ಶೋರೂಂಗಳು ಹವಾನಿಯಂತ್ರಿತವಾಗಿವೆ. ಕುಶಾಲನಗರದ ಮಳಿಗೆಯೂ ವಿಭಿನ್ನ, ಸುಸಜ್ಜಿತವಾಗಿದ್ದು, ಗ್ರಾಹಕರಿಗೆ ಅದ್ಭುತ ಸೇವೆ ನೀಡಲಿದೆ.
ಉತ್ತಮ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ನೀಡುವುದು ಸಂಸ್ಥೆಯ ಉದ್ದೇಶಈಗಾಗಲೆ ರಾಜ್ಯದ ೧೮೦೦ಕ್ಕೂ ಅಧಿಕ ಶಾಲೆಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುತ್ತಾ ಬರುತ್ತಿದ್ದೇವೆ. ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ನಮ್ಮ ಎಸ್.ಎಲ್.ವಿ. ಔಟ್ಲೇಟ್ ಅನ್ನು ತರೆದಿದ್ದು, ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕೊಡಗು ಭಾಗದ ಜನರಿಗೆ ಸಹಕಾರಿಯಾಗಲೆಂದು ಕುಶಾಲನಗರದ ಮುಖ್ಯ ರಸ್ತೆಯಲ್ಲಿ ನಮ್ಮ ನೂತನ ಔಟ್ಲೇಟ್ ಅನ್ನು ಆರಂಭಿಸಿದ್ದೇವೆ. ಈಗಾಗಲೇ ನಮ್ಮದೆ ಆದ ವೈಟ್ ಸ್ಪೇಸ್ ಬ್ರ್ಯಾಂಡ್ ನೋಟ್ ಪುಸ್ತಕಕ್ಕೆ ಬಹಳಷ್ಟು ಬೇಡಿಕೆ ಬರುತ್ತಿದೆ. ಆದರೆ ಈಗ ಸಧ್ಯಕ್ಕೆ ನಮ್ಮ ಔಟ್ಲೆಟ್ ಹಾಗೂ ಶಾಲೆಗಳಿಗೆ ಮಾತ್ರ ಸರಬರಾಜು ಮಾಡುತ್ತಿದ್ದೇವೆ. ಉತ್ತಮ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಕುಶಾಲನಗರ ಶಾಖೆ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ 40% ವರೆಗೆ ರಿಯಾಯಿತಿ ನೀಡಲಿದ್ದೇವೆ. ಗ್ರಾಹಕರಿಗೆ ಅನುಕೂಲವಾಗಲೆಂದು ವಾಗಲೆಂದು ಬುಕ್ಸ್, ಸ್ಟೇಶನರಿ, ಟೋಯ್ಸ್, ಬ್ಯಾಗ್, ಹಾಗೂ ಗಿಫ್ಟ್ ಐಟಂಗಳು ಎಲ್ಲವೂ ಒಂದೇ ಕಡೆ ಜೋಡಿಸಲಾಗಿದೆ. ಸಂಸ್ಥೆಯ ಬೆಳವಣಿಗೆಗೆ ತಮ್ಮೆಲ್ಲರ ಸಹಕಾರ ಅಗತ್ಯ. ದಿವಾಕರ ದಾಸ್ ನೇರ್ಲಾಜೆ,ಆಡಳಿತ ನಿರ್ದೇಶಕರು ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್