Published
1 week agoon
By
Akkare News
ಮೂಡುಬಿದಿರೆ:ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಸಮೀ ಪದ ನವಮಿ ಪ್ಲಾಜಾದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನ ನೂತನ ಮಳಿಗೆಯು ಶುಭಾರಂಭಗೊಂಡಿದೆ.
ಮಾಜಿ ಸಚಿವ ಅಭಯಚಂದ್ರ ಜೈನ್, ಶ್ರೀ ಧನಲಕ್ಷ್ಮಿ ಕ್ಯಾಶ್ ಎಕ್ಸ್‌ಪೋರ್ಟ್ಸ್ ನ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ., ನವಮಿ ಗ್ರೂಪ್‌ನ ಆಡಳಿತ ನಿರ್ದೆಶಕ ನಂದಕುಮಾರ್ ಕುಡ್ವ, ನಿಶ್ಚಿತಾ ಗ್ರೂಪ್‌ನ ಪ್ರವರ್ತಕ ನಾರಾಯಣ ಪಿ.ಎಂ. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಚೇರ್‌ಮೆನ್ ಜಿ.ಎಲ್. ಬಲರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ.ಎಲ್.ಆಚಾರ್ಯ ಜುವೆಲರ್ಸ್ ತನ್ನ ಹೊಸ ಶೋರೂಮ್‌ನ್ನು ಮೂಡುಬಿದಿರೆಯಲ್ಲಿ ಆರಂಭಿಸಿದೆ. ಹೊಸ ತಲೆಮಾರಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶಾಲವಾದ ಮತ್ತು ಆಕರ್ಷಕವಾದ ಜುವೆಲ್ಲರಿ ಶೋರೂಮ್‌ನ್ನು ಇಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ವಿನ್ಯಾಸದ ಚಿನ್ನಾಭರಣಗಳು, ನವೀನ ಶೈಲಿಯ ಮತ್ತು ಹೊಸ ಮಾದರಿಯ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲು ಜಿ.ಎಲ್. ಆಚಾರ್ಯ ಜುವೆಲರ್ಸ್ ಸಜ್ಜಾಗಿದೆ. ಕರಾವಳಿ ಭಾಗದ ಗ್ರಾಹಕರಿಗೆ ಮತ್ತು ಆಭರಣ ಪ್ರಿಯರಿಗೆ ನಮ್ಮ ಸಂಸ್ಥೆಯು ಉತ್ತಮ ಗುಣಮಟ್ಟದ ಆಭರಣಗಳ ಮುಖೇನ ಸೇವೆ ನೀಡುತ್ತಾ ಬಂದಿದೆ. ಮೂಡುಬಿದಿರೆಯ ಗ್ರಾಹಕರಿಗೆ ಸುಸಜ್ಜಿತವಾದ ಈ ಹೊಸ ಶೋರೂಮ್ ಉತ್ತಮ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದರು.
ಹೊಸ ಮಾದರಿಯ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲು ಜಿ.ಎಲ್. ಆಚಾರ್ಯ ಜಬವೆಲರ್ಸ್ ಸಜ್ಜಾಗಿದೆ. ಕರಾವಳಿ ಭಾಗದ ಗ್ರಾಹಕರಿಗೆ ಮತ್ತು ಆಭರಣ ಪ್ರಿಯರಿಗೆ ನಮ್ಮ ಸಂಸ್ಥೆಯು ಉತ್ತಮ ಗುಣಮಟ್ಟದ ಆಭರಣಗಳ ಮುಖೇನ ಸೇವೆ ನೀಡುತ್ತಾ ಬಂದಿದೆ. ಮೂಡುಬಿವಿರೆಯ ಉತ್ತಮ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದರು.
ನಿರ್ದೆಶಕರಾದ ಲಕ್ಷ್ಮೀಕಾಂತ ಬಿ.ಆಚಾರ್ಯ, ರಾಜೀವ್ ಬಲರಾಮ್ ಆಚಾರ್ಯ. ಸುಧನ್ವ ಆಚಾರ್ಯ, ಕುಟುಂಬಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು. ದೀಕ್ಷಾ ಬಂಗೇರ ನಿರೂಪಿಸಿದರು.