Published
2 hours agoon
By
Akkare News
ಶಿಕ್ಷಕರಿಗೆ ತರಗತಿ ನಿರ್ವಹಣಾ ಕೌಶಲ್ಯ ಕಾರ್ಯಾಗಾರ ಮತ್ತು ಪರಿಣಾಮಾತ್ಮಕ ಭೋಧನೆ ಬಗ್ಗೆ ತರಬೇತಿ ನೀಡಿದರು. ಇದಲ್ಲದೆ ಶಿಕ್ಷಕರಿಗೆ ಉಪಯುಕ್ತವಾಗುವಂತಹ ಅನೇಕ ಮಾಹಿತಿಗಳನ್ನು ನೀಡಿ ಶಿಕ್ಷಕರೊಡನೆ ಸಂವಾದ ನಡೆಸುವ ಮೂಲಕ ಅವರ ಅನೇಕ ಸಂಶಯಗಳಿಗೆ ಉತ್ತರ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯರು, ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು, J C ತರಬೆತುದಾರರಾದ ಶ್ರೀ ವೇಣುಗೋಪಾಲ್ ಎಸ್ ಜೆ , ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಸನ್ನ ಕೆ ಇವರುಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ರವಿಶಂಕರ್ ರವರು ವಂದಿಸಿದರು.



