Connect with us

ಇತರ

ಸಾಂದೀಪನಿಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

Published

on

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 06/05/2026 ನೇ ಬುಧವಾರ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೋನಾ ಜಾಕ್ವಲಿನ್ ಮೆಂಡೊನ್ಸಾ ಹಾಗೂ ಡಾ. ವಿದ್ಯಾ ವಿನುತಾ ಡಿಸೋಜ ರವರಿಂದ ಶಿಕ್ಷಕರಿಗೆ ಉಪಯುಕ್ತವಾದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಯಿತು. ಶಿಕ್ಷಕರಿಗೆ ತರಗತಿ ನಿರ್ವಹಣಾ ಕೌಶಲ್ಯ ಕಾರ್ಯಾಗಾರ ಮತ್ತು ಪರಿಣಾಮಾತ್ಮಕ ಭೋಧನೆ ಬಗ್ಗೆ ತರಬೇತಿ ನೀಡಿದರು. ಇದಲ್ಲದೆ ಶಿಕ್ಷಕರಿಗೆ ಉಪಯುಕ್ತವಾಗುವಂತಹ ಅನೇಕ ಮಾಹಿತಿಗಳನ್ನು ನೀಡಿ ಶಿಕ್ಷಕರೊಡನೆ ಸಂವಾದ ನಡೆಸುವ ಮೂಲಕ ಅವರ ಅನೇಕ ಸಂಶಯಗಳಿಗೆ ಉತ್ತರ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯರು, ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು, J C ತರಬೆತುದಾರರಾದ ಶ್ರೀ ವೇಣುಗೋಪಾಲ್ ಎಸ್ ಜೆ , ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಸನ್ನ ಕೆ ಇವರುಗಳು ಉಪಸ್ಥಿತರಿದ್ದರು.   ಶಾಲಾ ಮುಖ್ಯ ಗುರುಗಳು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ರವಿಶಂಕರ್ ರವರು ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version