Published
1 hour agoon
By
Akkare News
ಈಗಾಗಲೇ ಪುತ್ತೂರು ತಾಲೂಕಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಹಲವಾರು ವರ್ಷಗಳಿಂದ ಬೇಡಿಕೆಯಿದ್ದು ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸರ್ವೆ ನಂ. 84 ರಲ್ಲಿ ಸುಮಾರು 40 ಎಕರೆ ಜಮೀನನ್ನು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಕಾಯ್ದಿರಿಸಿ ಈಗಾಗಲೇ ಸದರಿ ಜಮೀನಿನಲ್ಲಿ 300 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ 189.00 ಕೋಟಿ ಮೊತ್ತ ಮಂಜೂರು ಗೊಂಡು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿರುತ್ತದೆ. ಸದರಿ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ಮಂಜೂರಾತಿ ನೀಡಿರುತ್ತಿರಿ ಆದ್ದುದರಿಂದ ಸದರಿ ಜಮೀನಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಬಗ್ಗೆ ಪ್ರಥಮ ಹಂತದ ಯೋಜನಾ ವರದಿ(ಡಿ.ಪಿ.ಆರ್) ತಯಾರಿಸಲು ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.



