ಸಭೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ನಾಯಕತ್ವ ಹಾಗೂ ಸಮರ್ಪಿತ ಸೇವೆ ಸಲ್ಲಿಸಿದ ನಿರ್ಗಮನ ಅಧ್ಯಕ್ಷ ರೂಪೇಶ್ ಪಿಂಟೋ ಹಾಗೂ ತಂಡಕ್ಕೆ ಯು ಎಲ್ ಎಫ್ ಕೃತಜ್ಞತೆ ಸಲ್ಲಿಸಿತು.
“ಏಕತೆ ಮತ್ತು ಸೇವೆ” ಎಂಬ ಧ್ಯೇಯವಾಕ್ಯದೊಂದಿಗೆ 2019ರ ನವೆಂಬರ್ನಲ್ಲಿ ಯುಎಇಯಲ್ಲಿ ಸ್ಥಾಪನೆಯಾದ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ (ಯು ಎಲ್ ಫ್) ಇಂದು ಸಮುದಾಯ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸದೃಢವಾಗಿ ಬೆಳೆಯುತ್ತಿದೆ. ಸಂಸ್ಥೆಯು ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, “ಕೊಂಕಣ್ ಉಡ್ಕಾನಾ” ಅದರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜೊತೆಗೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ವೈದ್ಯಕೀಯ ಸಹಾಯ, ಸ್ವಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಬೆಂಬಲ ಹಾಗೂ ಅಗತ್ಯವಿರುವವರಿಗೆ ಉದ್ಯೋಗ ಮತ್ತು ವೀಸಾ ಸಹಾಯ ಒದಗಿಸುವ ಮೂಲಕವೂ ಯು ಎಲ್ ಎಫ್ ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.