Published
2 hours agoon
By
Akkare News

ಕರ್ನಾಟಕದಲ್ಲಿಯೂ ಒಂದು ದಿನದ ಮಟ್ಟಿಗೆ ಸಂಪೂರ್ಣವಾಗಿ ಮೆಡಿಕಲ್‌ಗಳನ್ನ ಮುಚ್ಚಲು, ಕರ್ನಾಟಕ ಔಷಧಿ ಮಾರಾಟ ವ್ಯಾಪಾರಿಗಳ ಸಂಘದಿಂದ ಕರೆ ಕೊಡಲಾಗಿದೆ. ರಾಜ್ಯದಲ್ಲಿ 26,000 ಕ್ಕೂ ಹೆಚ್ಚು ಮೆಡಿಕಲ್‌ಗಳಿದ್ದು, 20ನೇ ತಾರೀಖು ರಾತ್ರಿ 12 ಘಂಟೆ 1 ನಿಮಿಷದಿಂದ ರಾತ್ರಿ 11 ಘಂಟೆ 59 ನಿಮಿಷದವರೆಗೆ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಆಪ್‌ಗಳಿಂದ ಔಷಧಿಗಳ ಮಾರಾಟ ಆಗ್ತಿದ್ದು, ಇದು ನೋಂದಣಿ ಪಡೆದ ಮೆಡಿಕಲ್ ಮಾಲೀಕರಿಗೆ ಹೊಡೆತ ಬೀಳ್ತಿದೆ ಅಂತ ಮೆಡಿಕಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ಔಷಧಿ ಮಾರಾಟಕ್ಕೆ ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಅನುಮತಿಯನ್ನ ನೀಡಲಾಗಿತ್ತು. ಅದನ್ನೇ ಮುಂದುವರೆಸಿದ ಕೆಲ ಆಪ್ ಆಧಾರಿತ ಕಂಪನಿಗಳು ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿವೆ. ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು. ಆದ್ರೂ ಯಾವ್ದೇ ಪ್ರಯೋಜನ ಆಗದ ಹಿನ್ನಲೆ, ದೇಶದ್ಯಾಂತ ಇರುವ 12.4 ಲಕ್ಷಕ್ಕೂ ಅಧಿಕ ಮೆಡಿಕಲ್‌ಗಳ ಬಂದ್ ಕರೆ ನೀಡಲಾಗಿದೆ.
ಆನ್‌ಲೈನ್‌ನಲ್ಲಿ ಮೆಡಿಸಿನ್ ಮಾರಾಟದಿಂದ ಸಮಸ್ಯೆ..? * ನಿಯಂತ್ರಣವಿಲ್ಲದ ಆನ್‌ಲೈನ್ ಔಷಧ ಮಾರಾಟ * ನಕಲಿ ಔಷಧಿ ಚೀಟಿಗಳ ಬಳಕೆ * ಆಂಟಿಬಯೋಟಿಕ್ ಮತ್ತು ಚಟ ಉಂಟುಮಾಡುವ ಔಷಧಿಗಳ ದುರುಪಯೋಗ * ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆ * ನಕಲಿ ಮತ್ತು ಸರಿಯಾಗಿ ಸಂಗ್ರಹಿಸದ ಔಷಧಿಗಳ ಅಪಾಯ * ಅತಿಯಾದ ಡಿಸ್ಕೌಂಟ್ ನೀತಿಯಿಂದಲೂ ಸಮಸ್ಯೆ * ಭಾರೀ ರಿಯಾಯಿತಿಯಿಂದ ಸಣ್ಣ ವ್ಯಾಪಾರಿಗಳಿಗೆ ಅಪಾಯ * ಮಾರುಕಟ್ಟೆಯಲ್ಲಿ ಏಕಾಧಿಪತ್ಯ ಭೀತಿ ಎದುರಾಗಿದೆ.


