Published
16 hours agoon
By
Akkare News
ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ಉಪ ವಿಭಾಗ ಹಾಗೂ ಎಚ್. ಪಿ. ಆರ್ ಶುಶ್ರೂಷಾ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೂರ್ ನಲ್ಲಿ ಆಯೋಜಿಸಲಾಯಿತು.
ಮಾನ್ಯ ಪುತ್ತೂರು ಶಾಶಕರಾದ ಶ್ರೀ ಅಶೋಕುಮಾರ್ ರೈ ಯವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಹಾಗೆಯೇ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ ಗುರುಪ್ರಸಾದ್ ಆಚಾರ್ಯ ಕಾರ್ಯಧ್ಯಕ್ಷ ರು ಎಸ್. ಡಿ. ಎಂ. ಸಿ ಬನ್ನೂರ್ ಶಾಲೆ ಇವರು ಪರಿಸರ ಸಂರಕ್ಷಣೆ ಬಗ್ಗೆ ಮಾತಾಡಿದರು.





