Connect with us

ಇತ್ತೀಚಿನ ಸುದ್ದಿಗಳು

ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ಉಪ ವಿಭಾಗ ಹಾಗೂ ಎಚ್. ಪಿ. ಆರ್ ಶುಶ್ರೂಷಾ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪುತ್ತೂರು ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ

Published

on

ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ಉಪ ವಿಭಾಗ ಹಾಗೂ ಎಚ್. ಪಿ. ಆರ್ ಶುಶ್ರೂಷಾ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೂರ್ ನಲ್ಲಿ ಆಯೋಜಿಸಲಾಯಿತು. ಮಾನ್ಯ ಪುತ್ತೂರು ಶಾಶಕರಾದ ಶ್ರೀ ಅಶೋಕುಮಾರ್ ರೈ ಯವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಹಾಗೆಯೇ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ ಗುರುಪ್ರಸಾದ್ ಆಚಾರ್ಯ ಕಾರ್ಯಧ್ಯಕ್ಷ ರು ಎಸ್. ಡಿ. ಎಂ. ಸಿ ಬನ್ನೂರ್ ಶಾಲೆ ಇವರು ಪರಿಸರ ಸಂರಕ್ಷಣೆ ಬಗ್ಗೆ ಮಾತಾಡಿದರು.

ಶಾಲೆಯ ಆವರಣದಲ್ಲಿ ಎಚ್. ಪಿ. ಆರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕರು ವಿವಿಧ ಬಗೆಯ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀ. ಸುಬ್ಬಯ್ಯ ನಾಯ್ಕ್ ಸಹಾಯಕಅರಣ್ಯ ಸಂರಕ್ಷಣಾ ಅಧಿಕಾರಿ ಪುತ್ತೂರು ಉಪವಿಭಾಗ, ಶ್ರೀ. ಮಹಮ್ಮದ್ ಅಶ್ರಫ್ ಮುಖ್ಯ ಶಿಕ್ಷಕರು, ವಲಯ ಅರಣ್ಯಧಿಕಾರಿ, ಹಾಗೂ ಸಿಬ್ಬಂದಿ ವರ್ಗ ಪುತ್ತೂರು ವಲಯ, ಎಚ್. ಪಿ. ಆರ್ ಸಂಸ್ಥೆ ಯ ಪ್ರಚಾರ್ಯರಾದ ಇವ್ನಿಸ್ ಡಿಸೋಜಾ, ಉಪಪ್ರಚಾರ್ಯರಾದ ಜಲಜ. ಎಸ್. ಎ,ಆಡಳಿತಧಿಕಾರಿ ಯಾದ ಶ್ರೀ. ಶಿವಪ್ರಸಾದ್ ರೈ, ಉಪನ್ಯಾಸಕ ವರ್ಗ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version