Published
7 hours agoon
By
Akkare News
ಬಂಟ್ವಾಳ, : ಬರಿಮಾರಿನಲ್ಲಿ ನಡೆದ ಶಾಲಾ ಬಸ್ ದುರಂತದಲ್ಲಿ ಪುಟಾಣಿ ವಿದ್ಯಾರ್ಥಿ ಮೃತಪಟ್ಟಿದ್ದು, ಬಳಿಕದ ಬೆಳವಣಿಗೆಯಲ್ಲಿ ಶಾಲಾ ಬಸ್ಸಿನ ದಾಖಲೆ ಪತ್ರಗಳು ಸಮಪರ್ಕವಾಗಿಲ್ಲದ ಬಗ್ಗೆ ತಿಳಿದು ಬಂದ ಬಳಿಕ ಸದ್ರಿ ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ಆಡಳಿತ ಮಂಡಳಿ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಆ ಬಳಿಕ ಶಾಲಾ ವಾಹನಗಳ ಬಗ್ಗೆ ಕೇರ್ ತೆಗೆದುಕೊಂಡ ಟ್ರಾಫಿಕ್ ಪೊಲೀಸ್ ಹಾಗೂ ಆರ್ ಟಿ ಒ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ. 
ಇದಲ್ಲದೆ, ವಿಮೆ, ತೆರಿಗೆ ಹಾಗೂ ಫಿಟ್ನೆಸ್ ಪ್ರಮಾಣ ಪತ್ರದ ಕೊರತೆ ಹಿನ್ನೆಲೆಯಲ್ಲಿ ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎ ಆರ್ ಟಿ ಒ) ಅವರು 3 ಶಾಲಾ ಬಸ್ಸುಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಇಂತಹ ಜಂಟಿ ಪರಿಶೀಲನಾ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




