Published
3 hours agoon
By
Akkare News
ಡಾಲಿ ಧನಂಜಯ್ ಅವರು ಇಂದು ತಮ್ಮ ಪುಟಾಣಿ ಮಗನ ಮುಖವನ್ನ ಅಭಿಮಾನಿಗಳಿಗೆ ತೋರಿಸಿದ್ದಾರೆ. ಹಾಗೇ ಅವನ ಹೆಸರನ್ನೂ ರಿವೀಲ್ ಮಾಡಿದ್ದಾರೆ. ಡಾಲಿ ಧನಂಜಯ್ ಮತ್ತು ಧನ್ಯತಾ ದಂಪತಿಗೆ ಇದೇ ವರ್ಷ ಮೇ ತಿಂಗಳಲ್ಲಿ ಮಗ ಹುಟ್ಟಿದ್ದಾನೆ. ಆದರೆ ಇದುವರೆಗೂ ತಮ್ಮ ಮಗನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕಿರಲಿಲ್ಲ. ಇಂದು ಗೌರಿ-ಗಣೇಶ ಹಬ್ಬದ ದಿನವೇ ಮುದ್ದುಮಗನ ಮುಖವನ್ನ ತೋರಿಸಿದ್ದಾರೆ.. 

ಡಾಲಿ ಧನಂಜಯ್ ಮತ್ತು ಧನ್ಯತಾ ಅವರು 2025ರ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಮೊದಲಿನಿಂದಲೂ ಸ್ನೇಹಿತರಾಗಿದ್ದವರು. ಇಬ್ಬರೂ ತಮ್ಮತಮ್ಮ ಫೀಲ್ಡ್ನಲ್ಲಿ ಹೆಸರು ಮಾಡಿದವರು. ಧನ್ಯತಾ ಅವರು ಖ್ಯಾತ ಪ್ರಸೂತಿ ವೈದ್ಯೆ. ಇದೇ ವರ್ಷ ಮೇ ತಿಂಗಳಲ್ಲಿ ಈ ದಂಪತಿಗೆ ಮಗ ಹುಟ್ಟಿದ್ದಾನೆ. 4 ತಿಂಗಳ ಬಳಿಕ ದಂಪತಿ ತಮ್ಮ ಮಗುವಿನ ಪರಿಚಯ ಮಾಡಿಸಿದ್ದಾರೆ. ಇನ್ನು ಇವರು ಮಗನಿಗೆ ಇಟ್ಟ ಎರೆಯ ಹೆಸರಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಎರೆಯ ಎಂದೇ ಆಗಿತ್ತು. ಅದನ್ನೇ ಅನೇಕರು ಉಲ್ಲೇಖಿಸಿದ್ದಾರೆ. ʼಬೂಟಾಟಿಕೆಗಾಗಿ ಕನ್ನಡವನ್ನು ಬೆಳೆಸುತ್ತಿದ್ದೀವಿ ಅನ್ನೋರ ಮಧ್ಯ ಕನ್ನಡವನ್ನು ಬಳಸಿ, ಕನ್ನಡತನವನ್ನು ಮೆರೆಸುವವ ಈ ಧನಂಜಯ, ಎರೆಯನ ತಂದೆ ಧನಂಜಯʼ ಎಂಬಿತ್ಯಾದಿ ಕಮೆಂಟ್ಗಳನ್ನ ಹಾಕಿದ್ದಾರೆ. ಎರೆಯ ಪದಕ್ಕೂ ಕನ್ನಡಿಗರಿಗೂ ಬಿಡಿಸಲಾಗದ ನಂಟು ಎಂದು ಹೇಳಿದ್ದಾರೆ.


