Published
2 hours agoon
By
Akkare News
ಬೆಳ್ತಂಗಡಿ ತಾಲೂಕಿನ ಫ್ರೆಂಡ್ಸ್ ತೆಕ್ಕಾರು ಆಶ್ರಯದಲ್ಲಿ ನಡೆಯುವ 2025-26 ನೇ ಸಾಲಿನ ತೆಕ್ಕಾರು ಟೈಗರ್ಸ್ ಕಾರ್ಯಕ್ರಮಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸಭೆಯು ತೆಕ್ಕಾರು ಟೈಗರ್ಸ್ ನ ಅಧ್ಯಕ್ಷ ತುಲಸಿ.ವಿ.ಕೋಟ್ಯಾನ್ ಬೇನಪ್ಪು ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ತೆಕ್ಕಾರಿನಲ್ಲಿ ನಡೆಯಿತು. ನವರಾತ್ರಿಯ ಪ್ರಯುಕ್ತ 5ನೇ ವರ್ಷದ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಬೆಳ್ತಂಗೆಡಿ ಶಾಸಕ ಹರೀಶ್ ಪೂಂಜಾ, ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ , ಬೆಂಗಳೂರಿನ ಖ್ಯಾತ ಉದ್ಯಮಿ ನಟೇಶ್ ಪೂಜಾರಿ, ಉಪ್ಪಿನಂಗಡಿಯ ಉದ್ಯಮಿ ಹರೀಶ್ ಪೂಜಾರಿ ನಿರಾಳ, ವೈದ್ಯರಾದ ರಾಜಾರಾಂ ಕೆ.ನಿ, ಬಾಗ್ಲೋಡಿ ಟ್ರಸ್ಟಿ ಅಣ್ಣು ಪೂಜಾರಿ ನೇಮಿಸಲಾಗಿದೆ.
ಶ್ರೀ ಗೋಪಾಲಕೃಷ್ಣ ತೆಕ್ಕಾರು ಇದರ ಅಧ್ಯಕ್ಷರಾಗಿ ತುಲಸಿ ವಿ. ಕೋಟ್ಯಾನ್ ಬೆನಪ್ಪು, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಆನಲ್ಕೆ, ರಂಜಿತ್ ಗೌಡ ಪಿಲಿಬೈಲು, ಸಂದೀಪ್ ಕುಪ್ಪೆಟ್ಟಿ, ಸತೀಶ್ ಗೌಡ ಪಿಲಿಗೂಡು , ಭರತ್ ಪೂಜಾರಿ ಬೇನಪ್ಪು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ ಮಜ್ಜಾಲೆ, ಯೋಗೀಶ್ ವಿದ್ಯಾಪುರ, ಜೊತೆ ಕಾರ್ಯದರ್ಶಿಗಳಾಗಿ ಜಯರಾಜ್ ಬಾಜಾರ, ಪ್ರದೀಪ್ ಪೂಜಾರಿ ವಂದಾಯ, ಕೋಶಾಧಿಕಾರಿಯಾಗಿ ಪ್ರಹ್ಲಾದ್ ಗೌಡ ವಾಟೆತಳ , ವಿಕ್ರಮ್ ವಿದ್ಯಾಪುರ ,ಪ್ರಚಾರ ಮತ್ತು ಮಾಧ್ಯಮ ಸಂಚಾಲಕರಾಗಿ ಶ್ರೀಕಾಂತ್ ಶೆಟ್ಟಿ ಇಳಂತಿಲ, ಕಾನೂನು ಸಲಹೆಗಾರರಾಗಿ ಹಿತೇಶ್ ಶೆಟ್ಟಿ ವಿದ್ಯಾಪುರ. ಸಾಮಾಜಿಕ ಜಾಲತಾಣ ನಿರ್ವಹಣಾ ಸಂಚಾಲಕರಾಗಿ ದೇವಿಪ್ರಸಾದ್ ಪೂಜಾರಿ ಬೇನಪ್ಪು, ಅಭಿಷೇಕ್ ವಿದ್ಯಾಪುರ, ಚಂದನ್ ಗೌಡ ಪಿಲಿಬೈಲು, ಸುದರ್ಶನ್ ಗೌಡ ಪಿಲಿಬೈಲು. ಪ್ರಧಾನ ಸಂಚಾಲಕರಾಗಿ ಕಿರಣ್ ರಾಜ್ ಬೇನಪ್ಪು, ಸುರೇಶ್ ಮರಮ ಪುಳಿತ್ತಡಿ, ದಿವಾಕರ ಅದಮ, ಮೋಹಿತ್ ಸಾಲಿಯಾನ್ ಮುಗ್ಗ , ದಿನೇಶ್ ಮಲೆಕೋಡಿ, ಚರಣ್ ರಾಜ್ ಬೇನಪ್ಪು ಆಯ್ಕೆಯಾಗಿರುತ್ತಾರೆ. 



