Published
18 hours agoon
By
Akkare News
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನ ಸೇರಿಸಲು ಪೋಷಕರು ಲಕ್ಷಾಂತರ ರೂಪಾಯಿಗಳನ್ನ ಖರ್ಜು ಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ನಂತಹ ವಿಷಯಗಳನ್ನ ಕಲಿಯಲು ಗಂಟೆಗಟ್ಟಲೆ ಸಮಯ ಕಳೆಯುವ ಮಕ್ಕಳು, ಶಾಲೆಯ ನಂತರ ಅದೇ ವಿಷಯಗಳನ್ನ ಕಲಿಯಲು ಮತ್ತೆ ಖಾಸಗಿ ಟ್ಯೂಷನ್ ಮೊರೆ ಹೋಗುತ್ತಿದ್ದಾರೆ.
ಈ ‘ಡಬಲ್ ಪೇಮೆಂಟ್’ ಅಂದರೆ ಒಂದೇ ವಿಷಯಕ್ಕೆ ಎರಡು ಬಾರಿ ಹಣ ಪಾವತಿಸುವ ಪದ್ಧತಿ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. 
ಶಾಲಾ ಶುಲ್ಕ ಮತ್ತು ಟ್ಯೂಷನ್: ಡಾ. ಸನ್ನಿ ಗರ್ಗ್ ಎತ್ತಿದ ಪ್ರಮುಖ ಪ್ರಶ್ನೆ
ಶಿಕ್ಷಣ ಕ್ಷೇತ್ರದ ಉದ್ಯಮಿ ಹಾಗೂ ತಜ್ಞರಾದ ಡಾ. ಸನ್ನಿ ಗರ್ಗ್ ಅವರು ಇತ್ತೀಚೆಗೆ ಇದೇ ವಿಚಾರವಾಗಿ ಒಂದು ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾರೆ. “ನಾವು ಒಂದೇ ಶಿಕ್ಷಣಕ್ಕಾಗಿ, ಅದೇ ಕೋರ್ ವಿಷಯಗಳಿಗಾಗಿ ಎರಡು ಬಾರಿ ಹಣ ಪಾವತಿಸುವುದನ್ನು ಏಕೆ ಸಹಜವೆಂದು ಒಪ್ಪಿಕೊಂಡಿದ್ದೇವೆ?” ಎಂದು ಅವರು ಪ್ರಶ್ನಿಸಿದ್ದಾರೆ. ಸಿಇಒ ರಿವ್ಯೂ ಈ ಕುರಿತು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಶಿಕ್ಷಣ ವ್ಯವಸ್ಥೆಯ ಲೋಪಗಳನ್ನ ಎತ್ತಿ ತೋರಿಸಿದೆ. ಪೋಷಕರು ದುಬಾರಿ ಶಾಲಾ ಶುಲ್ಕ ಪಾವತಿಸಿದರೂ, ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಬೆಂಬಲಕ್ಕಾಗಿ ಪ್ರತ್ಯೇಕ ಕೋಚಿಂಗ್ ಅಥವಾ ಟ್ಯೂಷನ್ ತರಗತಿಗಳನ್ನ ಅವಲಂಬಿಸುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ.

ಭಾರತೀಯ ಶಿಕ್ಷಣ ವ್ಯವಸ್ಥೆ: ತರಗತಿಯ ಕಲಿಕೆ ಸಾಲುತ್ತಿಲ್ಲವೇ? ಖಾಸಗಿ ಟ್ಯೂಷನ್ ಇಂದು ಭಾರತೀಯ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಿದರೂ, ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವೈಯಕ್ತಿಕ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆ ಉಂಟುಮಾಡುತ್ತಿದೆ. 
ಪರಿಣಾಮವಾಗಿ, ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಮತ್ತು ಪೈಪೋಟಿಯನ್ನ ಎದುರಿಸಲು ಶಾಲೆಯ ನಂತರದ ಟ್ಯೂಷನ್ಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಇದು ಕೇವಲ ಹೆಚ್ಚುವರಿ ಅಭ್ಯಾಸಕ್ಕೆ ನೆರವಾದರೆ, ಇನ್ನು ಕೆಲವರಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳ ಓಟದಲ್ಲಿ ಮುಂದೆ ಹೋಗಲು ಅನಿವಾರ್ಯವಾಗಿದೆ. 



