Connect with us

ಇತರ

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ

Published

on

ಬೆಂಗಳೂರು : ಪರಿಸರವಾದಿಗಳು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಬಿ. ಗುಣರಂಜನ್ ಶೆಟ್ಟಿ ಅವರ ಘನ ಉಪಸ್ಥಿತಿಯಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀ ಜೆ. ಶ್ರೀನಿವಾಸ್, ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್. ರಾಮಚಂದ್ರಯ್ಯ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿಗಳಾದ ಶ್ರೀ ಟಿ. ಪ್ರಕಾಶ್ ಗೌಡ ಅವರ ಸಮ್ಮುಖದಲ್ಲಿ, ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಪಿ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಬೆಂಗಳೂರು ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭವು ಬೆಂಗಳೂರಿನ ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಿಸಿಯು ಬೇಸ್ ಕ್ಯಾಂಪ್‌ನಲ್ಲಿ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಅಭಿನಂದನೆ: ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ, ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು. ಅವರ ಸಾಧನೆಗೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದರು. ಬೆಂಗಳೂರು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರಗಳ ಪದಗ್ರಹಣ: ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಬೆಂಗಳೂರು ಜಿಲ್ಲಾ ಘಟಕ – ಕಾರ್ಯಾಧ್ಯಕ್ಷರು: ಅನಿಲ್ ಕುಮಾರ್ ಶೆಟ್ಟಿ – ಉಪಾಧ್ಯಕ್ಷರು: ಅಂಬರೀಶ್ – ಕಾರ್ಯಕಾರಿ ಸಮಿತಿ ಸದಸ್ಯರು: ಮಧುಸೂಧನ್ 🔹 ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು – ಬ್ಯಾಟರಾಯನಪುರ: ಪವನ್ ಎಂ. – ಮಹದೇವಪುರ: ಅರವಿಂದ್ ಯಾದವ್ ಜಿ.ಆರ್. – ಬಿ.ಟಿ.ಎಂ. ಲೇಔಟ್: ಸಂಜೀವಪ್ಪ – ಪುಲಕೇಶಿನಗರ: ಕುಮಾರೇಶನ್ 🔹 ಶಿವಾಜಿನಗರ ವಿಧಾನಸಭಾ ಕ್ಷೇತ್ರ – ರಾಮಸ್ವಾಮಿಪಾಳ್ಯ ವಾರ್ಡ್ ಅಧ್ಯಕ್ಷರು: ಆದಿನಾರಾಯಣ – ಉಪಾಧ್ಯಕ್ಷರು: ಜಿ. ಅಶೋಕ್ 🌸 ಮಹಿಳಾ ಘಟಕದ ನೂತನ ಪದಾಧಿಕಾರಿಗಳು ಬೆಂಗಳೂರು ಜಿಲ್ಲಾ ಮಹಿಳಾ ಘಟಕ – ಉಪಾಧ್ಯಕ್ಷರು: ಜ್ಯೋತಿ ವಿ., ರೂಪ ವಿ., ನಿರ್ಮಲ ಸತೀಶ್ – ಸಂಘಟನಾ ಕಾರ್ಯದರ್ಶಿ: ಕೋಮಲ

ಆನೇಕಲ್ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಚಂದ್ರಕಲಾ – ಗೌರವಾಧ್ಯಕ್ಷರು: ಶಾಂತ – ಉಪಾಧ್ಯಕ್ಷರು: ಸರಸ್ವತಮ್ಮ, ಭಾಗ್ಯ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಗೀತಾ – ಗೌರವಾಧ್ಯಕ್ಷರು: ಧನಲಕ್ಷ್ಮಿ – ಉಪಾಧ್ಯಕ್ಷರು: ಯಶೋಧ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಸುನಿತಾ ಸಿಂಗ್ – ಮಾವಳ್ಳಿ ವಾರ್ಡ್ ಅಧ್ಯಕ್ಷರು: ನಾಗಜ್ಯೋತಿ – ಉಪಾಧ್ಯಕ್ಷರು: ನೀಲಂ ತಿವಾರಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ರೇಣುಕಾ – ಉಪಾಧ್ಯಕ್ಷರು: ರತ್ನ ಜಯನಗರ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಸುಮಿತ್ರಾ – ಉಪಾಧ್ಯಕ್ಷರು: ಪುಷ್ಪಲತಾ ರೆಡ್ಡಿ, ವೀಣಾ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಮಂಜುಳ – ಗೌರವಾಧ್ಯಕ್ಷರು: ಶೋಭಾ – ಉಪಾಧ್ಯಕ್ಷರು: ಕೋಮಲ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಸೌಜನ್ಯ ಯಶವಂತಪುರ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ನಾಗರತ್ನ ಶಿವಾಜಿನಗರ ವಿಧಾನಸಭಾ ಕ್ಷೇತ್ರ – ಅಧ್ಯಕ್ಷರು: ಮಾಲಾ – ಉಪಾಧ್ಯಕ್ಷರು: ಶಾರದಾ ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿ, ಸಂಘಟನೆಯ ಬಲವರ್ಧನೆ ಹಾಗೂ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಹಾ ಪ್ರಧಾನ ಸಂಚಾಲಕರಾದ ಶೆ. ಭೋ. ರಾಧಾಕೃಷ್ಣ, ಖಜಾಂಚಿ ಉದಯ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಗೋಪಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಜಿ.ಎಸ್. ಪುಷ್ಪಲತಾ, ಬೆಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸುನಂದಾ ರೆಡ್ಡಿ ಸೇರಿದಂತೆ ಬೆಂಗಳೂರು ಜಿಲ್ಲಾ ಪದಾಧಿಕಾರಿಗಳು, ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು.

ಜಯಕರ್ನಾಟಕ ಜನಪರ ವೇದಿಕೆಯ ಸಂಘಟನಾ ಶಕ್ತಿ ಮತ್ತಷ್ಟು ವೃದ್ಧಿಯಾಗಿ, ಸಮಾಜಮುಖಿ ಕಾರ್ಯಗಳು ಹಾಗೂ ಜನಪರ ಹೋರಾಟಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಮುಂದುವರಿಯಲಿ ಎಂದು ಸಂಸ್ಥಾಪಕ ಅಧ್ಯಕ್ಷರು ನೂತನ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement