Connect with us

ಇತರ

ಜನ ಸಂಪರ್ಕಸಭೆಯಲ್ಲಿ ಪುತ್ತೂರು ಮೆಸ್ಕಾಂ ಇಲಾಖೆಯ ಮೇಲೆ ಆರೋಪ ಮಹಿಳಾ ದೌಜನ್ಯ ಮತ್ತು ಇಲಾಖೆಯ ಭ್ರಷ್ಟಾಚಾರ ಸ್ಪಷ್ಟೀಕರಣ ನೀಡಿದ : ರಾಮಚಂದ್ರ ಕಾರ್ಯನಿರ್ವಾಹನ (ವಿ) ಇಂಜಿನಿಯರ್ ಮೆಸ್ಕಾಂ ಪುತ್ತೂರು ವಿಭಾಗ

Published

on

ಪುತ್ತೂರು: ದಿ.5.11.2026 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಪುತ್ತೂರು ನಗರ ಮತ್ತು ಗ್ರಾಮಾಂತರ ಉಪವಿಭಾಗದ ವಿದ್ಯುತ್ ಗ್ರಾಹಕರು, ಗ್ರಾಹಕ ಸಮಿತಿ ಸದಸ್ಯರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಇಲಾಖೆಯ ವಿವಿಧ ಅಧಿಕಾರಿಗಳು, ಪತ್ರಿಕಾ ವರದಿಗಾರರು, ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಜರಿದ್ದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯ‌ರ್(ವಿ) ನೇತೃತ್ವದಲ್ಲಿ ಗ್ರಾಹಕರ ವಿದ್ಯುತ್ ಸಂಬಂಧಿತ ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು ಸೂಕ್ತ ಮಾಹಿತಿ ನೀಡಲಾಗಿದೆ.

ಸದರಿ ಸಭೆಯಲ್ಲಿ ಪುತ್ತೂರು ನಗರ ಗ್ರಾಮಾಂತರ ಉಪವಿಭಾಗ ವ್ಯಾಪ್ತಿಗೆ ಸಂಬಂಧಪಡದ ಗ್ರಾಹಕರು/ಗುತ್ತಿಗೆದಾರರೊಬ್ಬರು ಮಾಡಿರುವ ಆರೋಪಗಳ ಕುರಿತು ಈ ಕೆಳಗಿನಂತೆ ಸೃಷ್ಟಿಕರಣ ನೀಡಲಾಗಿದೆ. ಪುತ್ತೂರು ವಿಭಾಗ ವ್ಯಾಪ್ತಿಗೆ ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಕಡಬ ಸುಬ್ರಹ್ಮಣ್ಯ ಉಪವಿಭಾಗಗಳು ಒಳಪಟ್ಟಿದ್ದು, ಇಲ್ಲಿ ಅನೇಕ ಅನುಮತಿ ಪಡೆದ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿರುತ್ತಾರೆ. ವಿಭಾಗದ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮಂಜೂರಾಗಿರುವ 77 ಸಂಖ್ಯೆಯ ಕಾಮಗಾರಿಗಳನ್ನು 24 ಸಂಖ್ಯೆಯ ಗುತ್ತಿಗೆದಾರರಿಗೆ ನಿಗದಿತ ಮಾನದಂಡಗಳ ಪ್ರಕಾರ ಕಂಪನಿ ನಿಯಮಾನುಸಾರ ಹಂಚಿಕೆ ಮಾಡಿ ಕೆಲಸ ನಿರ್ವಹಿಸುತ್ತಿರುವುದಾಗಿದೆ. ಮಾನ್ಸೂನ್ ಸಂದರ್ಭದಲ್ಲಿ ಪುತ್ತೂರು ವಿಭಾಗದ 19 ಶಾಖೆಗಳಿಗೆ ಮಂಜೂರಾಗಿರುವ ಗ್ಯಾಂಗ್ ಮ್ಯಾನ್ ಗಳನ್ನು ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮುಖಾಂತರ ಅರ್ಹ ಗುತ್ತಿಗೆದಾರರಿಗೆ ನೀಡಿ ಶಾಖಾ ವ್ಯಾಪ್ತಿಯ ನಿರ್ವಹಣೆ ಕೆಲಸಗಳನ್ನು ಮಾಡಿಸುತ್ತಿರುವುದಾಗಿದೆ. ಸದ್ರಿ ಕೆಲಸಗಳನ್ನು ಶಾಖೆಗಳ ಶಾಖಾಧಿಕಾರಿಯವರಿಂದ ಮೇಲ್ವಿಚಾರಣೆ ಮಾಡಿಸಿ, ಉಪವಿಭಾಗಾಧಿಕಾರಿಗಳ ದೃಢೀಕರಣದ ನಂತರವೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಕ್ರಮ ಕೈಗೊಂಡಿರುವುದಾಗಿದೆ.

ಪುತ್ತೂರು ಮೆಸ್ಕಾಂ ವಿಭಾಗ ಮತ್ತು ಉಪ ವಿಭಾಗ ಕಚೇರಿಗಳು ಬೆಳಗ್ಗೆ 10:00ರಿಂದ ಸಂಜೆ 5:30 ವರೆಗೆ ಕಾರ್ಯಾಚರಿಸುತ್ತಿದ್ದು ಅಧಿಕಾರಿ/ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಲಭ್ಯರಿರುತ್ತಾರೆ. ಈ ಕುರಿತು ಸಾರ್ವಜನಿಕರಿಂದ/ಗ್ರಾಹಕರಿಂದ ಈವರೆಗೆ ಯಾವುದೇ ದೂರು ಈ ಕಚೇರಿಯಲ್ಲಿ ಸ್ವೀಕರಿಸಿರುವುದಿಲ್ಲ.

 

అజి ಘನ ಕರ್ನಾಟಕ ಸರ್ಕಾರದ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ಯಾವುದೇ ಅರ್ಹ ವ್ಯಕ್ತಿಯು ಸಲ್ಲಿಸಿ ವಿದ್ಯುತ್ ಪರಿವೀಕ್ಷಕರ ಕಚೇರಿಯಿಂದ ವಿದ್ಯುತ್ ಗುತ್ತಿಗೆದಾರರ ಪರವಾನಿಗೆ ಪಡೆದುಕೊಳ್ಳಬಹುದಾಗಿದ್ದು, ಪುತ್ತೂರು ವಿಭಾಗದ ವ್ಯಾಪ್ತಿಯ ಯಾವುದೇ ಅಧಿಕಾರಿ/ನೌಕರರ ಪತ್ನಿ ವಿಭಾಗದ ವ್ಯಾಪ್ತಿಯಲ್ಲಿ ಕಾರ್ನಿವ್ರಹಿಸುತ್ತಿರುವ 5 ಉಪವಿಭಾಗಗಳಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿಯನ್ನು ನಿರ್ವಹಿಸಿರುವುದಿಲ್ಲ.

ಮುಂದುವರಿಯುತ್ತಾ, ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿಯನ್ನು ಇಲಾಖೆಯಿಂದ ಗುತ್ತಿಗೆದಾರರಿಗೆ ವಹಿಸಲಾಗಿರುವುದಿಲ್ಲ. ಸದರಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ವಂತ ಖರ್ಚಿನ ನಿಯಾಮಾನುಸಾರ ನಿರ್ವಹಿಸುತ್ತಿದ್ದು, ಅರ್ಜಿದಾರರೇ ನಿಗದಿಪಡಿಸಿದ ವಿದ್ಯುತ್ ಗುತ್ತಿಗೆದಾರರ ಕಾಮಗಾರಿಯನ್ನು ಇಲಾಖೆಯ ಮೇಲ್ವಿಚಾರಣೆಯಲ್ಲಿ ನಿರ್ವಹಿಸುವುದಾಗಿದೆ.ಮೆಸ್ಕಾಂ ಇಲಾಖೆಯ ಅಧಿಕಾರಿಯೊಬ್ಬರು ಗುತ್ತಿಗೆದಾರರ ಮಹಿಳಾ ಸಹಾಯಕಿಯನ್ನು ಸ್ಥಳ ಪರಿಶೀಲನೆಯ ನೆಪದಲ್ಲಿ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ ಎಂಬ ಕುರಿತು ಈ ಕಚೇರಿಗೆ ಈವರೆಗೆ ದೂರುಗಳು ಬಂದಿರುವುದಿಲ್ಲ ಹಾಗೂ ಸಂಬಂಧಪಟ್ಟವರು ದೂರು ನೀಡಿದಲ್ಲಿ ಇಲಾಖೆಯ ನಿಯಮಾನುಸಾರ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಸದ್ರಿ ಸಭೆಯಲ್ಲಿ ಸ್ಪಷ್ಟಿಕರಣ ನೀಡಲಾಗಿರುತ್ತದೆ.
ಇದಲ್ಲದೆ ಸದ್ರಿ ಈ ಸಭೆಯಲ್ಲಿ ಪುತ್ತೂರು ನಗರ/ ಗ್ರಾಮಾಂತರ ಉಪವಿಭಾಗ ವ್ಯಾಪ್ತಿಗೆ ಸಂಬಂಧಪಡದ ವ್ಯಕ್ತಿಯೊಬ್ಬರು ಇಲಾಖೆಯ ಕಾರ್ಯವೈಕರಿ ಬಗ್ಗೆ ಹಲವಾರು ಆರೋಪ ಮಾಡಿದ್ದು, ಈ ಕುರಿತು ಯಾವುದೇ ದೂರುಗಳು ಬಂದಿರುವುದಿಲ್ಲ ಮತ್ತು ಸದರಿಯವರು ಸಹ ಈ ಸಭೆಯಲ್ಲಿ ಯಾವುದೇ ಲಿಖಿತ ದೂರು ನೀಡಿರುವುದಿಲ್ಲ. ಅಲ್ಲದೇ ಈ ಸಭೆಯಲ್ಲಿ ಪುತ್ತೂರು ನಗರ/ಗ್ರಾಮಾಂತರ ವಿಭಾಗ ವ್ಯಾಪ್ತಿಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು, ಕಾಮಗಾರಿಗಳ ಹಂಚಿಕೆಯ ಕುರಿತು ಅಥವಾ ಇನ್ಯಾವುದೇ ಆರೋಪಗಳ ಕುರಿತು ದೂರು ನೀಡಿರುವುದಿಲ್ಲ.

ಆದುದರಿಂದ ಸದರಿ ಸಭೆಯಲ್ಲಿ ಆರೋಪಿಸಲಾಗಿರುವ ಎಲ್ಲಾ ದೂರುಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ ಕಾರ್ಯನಿರ್ವಾಹಕ ಇಂಜಿನಿಯ‌ರ್(ವಿ) ಮೆಸ್ಕಾಂ, ಪುತ್ತೂರು ವಿಭಾಗ

 

Continue Reading
Click to comment

Leave a Reply

Your email address will not be published. Required fields are marked *

Advertisement