Published
7 hours agoon
By
Akkare News
ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ ಪೂರ್ವಸಿದ್ದತಾ ಸಭೆ ಹಾಗೂ ವಿವಿಧ ಸಮಿತಿಯ ಸದಸ್ಯರ ಜೊತೆ ನಡೆದ ಪ್ರಮುಖ ಸಭೆಯಲ್ಲಿ ಮಾತನಾಡಿದರು. ನ.೨೨ ರಂದು ಬೆಳಿಗ್ಗೆ ೯.೩೦ ರಿಂದ ಅಶೋಕ ಜನಮನ ಕಾರ್ಯಕ್ರಮ ಆರಂಭವಾಗುತ್ತದೆ. ಬರುವ ಎಲ್ಲಾ ಸಾರ್ವಜನಿಕರು ನಮ್ಮ ಅತಿಥಿಯಾಗಿರುತ್ತಾರೆ, ಬಂದವರನ್ನು ಕಾಯಿಸುವ ಪ್ರಶ್ನೆಯೇ ಇಲ್ಲ ಬೆಳಿಗ್ಗೆ ಬಂದವರಿಗೆ ಬೆಳಿಗ್ಗಿನ ಉಪಹಾರ ಸೇವನೆ ಮಾಡಿ ಉಡುಗೋರೆಯನ್ನು ಪಡೆದುಕೊಂಡು ತೆರಳಬಹುದು, ಮಧ್ಯಾಹ್ನ ಬಂದವರು ಊಟ ಮಾಡಿ ತೆರಳಬಹುದು ಸಂಜೆ ಬಂದವರು ಸಂಜೆಯ ಉಪಹಾರ ಸೇವಿಸಿ ಉಡುಗೋರೆ ಪಡೆದು ತೆರಳಬಹುದು ಎಂದು ಶಾಸಕರು ತಿಳಿಸಿದರು.
ನ.೮ ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಿದ್ದು, ಮಳೆ ಬಂದರೆ ಜನರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಮುಂದೂಡಿದ್ದೇವೆ, ನಿಮಗಾಗಿಯೇ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ಒಂದು ಲಕ್ಷ ಮಂದಿಯ ನಿರೀಕ್ಷೆ ಅಶೋಕ ಜಮನ ಕಾರ್ಯಕ್ರಮಕ್ಕೆ ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಬಂದ ಎಲ್ಲರಿಗೂ ಊಟ , ಉಪಹಾರದ ಜೊತೆಗೆ ಉಡುಗೋರೆಯನ್ನು ವಿತರಿಸಲಾಗುತ್ತದೆ. ತಟ್ಟೆ, ಟವೆಲ್, ಬೆಡ್ ಶೀಟ್ ಹಾಗೂ ಸಾರಿ ಈ ಮೂರಲ್ಲಿ ಯಾವುದಾದರು ಒಂದನ್ನು ಪಡೆಯಬಹುದಾಗಿದೆ., ಉತ್ತಮ ಗುಣಮಟ್ಟದ ಉಡುಗೋರೆಯನ್ನು ವಿತರಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. ಈಗಾಗಲೇ ಗ್ರಾಮ ಮಟ್ಟಕ್ಕೆ ತೆರಳಿ ಗ್ರಾಮಸ್ಥರನ್ನು ಆಮಂತ್ರಿಸುವ ಕೆಲಸವನ್ನು ಟ್ರಸ್ಟ್ ಸದಸ್ಯರು ಮಾಡುತ್ತಿದ್ದಾರೆ. ಆಮಂತ್ರಣ ಸಿಗದವರು ಇದುವೇ ಆಮಂತ್ರಣ ಎಂದು ತಿಳಿದು ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.


ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಸುಮಾ ಅಶೋಕ್ ರೈ, ಮಹಮ್ಮದ್ ಬಡಗನ್ನೂರು,ಡಾ. ರಾಜಾರಾಮ್ ಕೆ ಬಿ, ಮುರಳೀದರ್ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಯು ಟಿ ತೌಸೀಫ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಶೆಟ್ಟಿ ಪುತ್ತೂರು, ನಿಹಾಲ್ ಪಿ ಶೆಟ್ಟಿ ಸಾಮೆತ್ತಡ್ಕ, ಯೋಗೀಶ್ ಸಾಮಾನಿ ರಾಧಾಕೃಷ್ಣ ನಾಯ್ಕ್, ರಾಮಣ್ಣ ಪಿಲಿಂಜ ಉಪ್ಪಿನಂಗಡಿ ಸೇರಿದಂತೆ ಟ್ರಸ್ಟ್ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.


