ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ತಾಲೂಕಿನ ಅಕ್ರಮ -ಸಕ್ರಮ.94ಸಿ .94ಸಿಸಿ.ಹಕ್ಕುಪತ್ರ ವಿತರಣೆ. ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ . ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಚುನಾವಣೆಯ ಸಂದರ್ಭ ಏನು ಭರವಸೆ ನೀಡಿದ್ದೆನೋ ಅದನ್ನು ಇವತ್ತು ಪ್ರಾಮಾಣಿಕವಾಗಿ ಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನನ್ನ ಕನಸಿನ ಸಭೆಯಾಗಿದೆ. ಅದೇ ರೀತಿ ಸಮಾರು ಏಳೆಂಟು ವರ್ಷಗಳಿಂದ ಬಾಕಿಯಾಗಿದ್ದ ಕಡತಗಳನ್ನು ಕೂಡಾ ಕ್ಲೀಯರ್ ಮಾಡಿ ಇವತ್ತು ವಿತರಣೆ ಮಾಡುತ್ತಿದ್ದೇವೆ ಎಂದರೆ ಇದಕ್ಕೆ ಕಾರಣ ನಮ್ಮ ಅಧಿಕಾರಿ ವರ್ಗದವರು. ಬಡವರು ಕೃಷಿ ಮಾಡಿದ ಜಾಗವನ್ನು ಭ್ರಷ್ಟಾಚಾರ ರಹಿತವಾಗಿ ಕೊಡುವ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.

ಪುತ್ತೂರು ಶಾಸಕ ಕಚೇರಿ ವಠಾರದಲ್ಲಿ ಜ.2ರಂದು ನಡೆದ ಅಕ್ರಮ ಸಕ್ರಮ ಮತ್ತು 94 ಸಿ, 94ಸಿಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲೇ ಪುತ್ತೂರಿನಲ್ಲೇ ಪ್ರಥಮವಾಗಿ ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದು, ಇದರ ಜೊತೆಗೆ ಪ್ರಥಮವಾಗಿ ಕಡತ ವಿಲೇವಾರಿಯೂ ಪುತ್ತೂರಿನಲ್ಲೇ ನಡೆಯುತ್ತಿರುವುದು ಸಂತೋಷದ ವಿಚಾರ. ಸುಮಾರು 187 ಜನರಿಗೆ 94 ಸಿ ಮತ್ತು 94 ಸಿಸಿ ಮತ್ತು ಅಕ್ರಮ ಸಕ್ರಮ 273 ಮಂದಿಗೆ ವಿತರಣೆ ಮಾಡುತ್ತಿದ್ದೇವೆ. ಮುಂದೆ ವಿಟ್ಲ ಉಪ್ಪಿನಂಗಡಿ ಭಾಗದಲ್ಲೂ 260 ಮಂದಿಯ ಕಡತ ಸಿದ್ದಗೊಂಡಿದೆ. ಮುಂದಿನ ದಿನ ಅದನ್ನು ಮಾಡಲಾಗುವುದು. ಈ ಭಾಗದಲ್ಲಿ ಸುಮಾರು 28ಸಾವಿರ ಕಡತ ಬಾಕಿ ಇದೆ. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ವಿಭಾಗದಲ್ಲಿ 12ಸಾವಿರ ಕಡತ ಬಾಕಿ ಇದೆ. ಅದನ್ನು ಹಂತ ಹಂತವಾಗಿ ಕಾನೂನಿನ ಅಡಿಯಲ್ಲಿ ಮಾಡುವ ಕೆಲಸ ಮಾಡಲಿದ್ದೇವೆ.


ಬಡವರು ಕೃಷಿ ಮಾಡಿದ ಜಾಗವನ್ನು ಭ್ರಷ್ಟಾಚಾರ ರಹಿತವಾಗಿ ಕೊಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಅದನ್ನು ಕಂಡಿತವಾಗಿ ಮುಂದಿನ ದಿನ ಮಾಡಲಿದ್ದೇವೆ. ಈ ಕುರಿತು ತಹಶೀಲ್ದಾರ್‌ಗೆ ಸೂಚನೆ ಮಡಿದ್ದೇನೆ. ಮುಂದಿನ ದಿನ ಎರಡು ಮೂರು ಗ್ರಾಮಕ್ಕೆ ಸೇರಿ ಗ್ರಾಮ ಗ್ರಾಮದಲ್ಲಿ ಕಡತ ವಿಲೇವಾರಿ ನಡೆಯಲಿದೆ. ಕಳೆದ ಏಳೆಂಟು ವರ್ಷಗಳಿಂದ ಬಾಕಿಯಾಗಿರುವ ಕಡತವನ್ನು ಕೂಡಾ ಇವತ್ತು ಕ್ಲೀಯರ್ ಮಾಡುವ ಕೆಲಸ ಮಾಡಿದ್ದೇವೆ. ಇದಕ್ಕೆ ಅಧಿಕಾರಿ ವರ್ಗದವರು ಸಹಕಾರ ನೀಡಿದ್ದಾರೆ. ನಮಗೆ ಯಾವುದೇ ಅಧಿಕಾರಿಗಳ ವಿರೋಧವಿಲ್ಲ. ಆದರೆ ಅಧಿಕಾರಿಗಳಿಂದ ಬಡವರಿಗೆ ತೊಂದರೆ ಆದರೆ ಕಂಡಿತಾ ಅಶೋಕ್ ರೈ ಅದನ್ನು ಸಹಿಸುವುದಿಲ್ಲ.

ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಅಧಿಕಾರಿಗಳ ಒಳ್ಳೆಯ ತಂಡ ಇದೆ. ಯಾರು ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡದ ಕೆಲಸವನ್ನು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳ ಸಹಕಾರದಿಂದ ಇವತ್ತು ಮಾಡಿದ್ದೇವೆ ಎಂದು ಸಂತೋಷದಿAದ ಹೇಳುತ್ತಿದ್ದೇನೆ ಎಂದರು.ಸಹಾಯಕ ಕಮೀಷನ‌ರ್ ಜುಬಿನ್ ಮೋಹ ಪಾತ್ರ, ತಹಸೀಲ್ದಾರ್ ಶಿವಶಂಕರ್, ಅಕ್ರಮ ಸಮಿತಿ ಸದಸ್ಯರಾದ ರೂಪಲೇಖ, ರಾಮಣ್ಣ ಪಿಲಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version