Published
1 year agoon
By
Akkare Newsಕೋಡಿಂಬಾಡಿ. ಜ 10, ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಪಂಚಾಯತ್ ನಿಂದ ಅರ್ಬಿ ಕಾಪು ತನಕ ಸ್ವಚ್ಛ ಮಾಡಲಾಯಿತು, ಮಾರ್ಗದ ಬದಿಯಲ್ಲಿ ಪ್ರಯಾಣಿಕರು ಕಸ ಬಿಸಡುವದರಿಂದ ನಮ್ಮ ಗ್ರಾಮ ಮಾಲಿನ್ಯವಾಗುತ್ತದೆ, ಮುಂದಿನ ದಿನಗಳಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾವಲುಪಡೆ ರಚಿಸಲಾಗುವುದು, ಮತ್ತು ಆಕರ್ಷಣೆಯ ಬೋರ್ಡ್ ಗಳನ್ನು ಹಾಕಲಾಗುವುದು ಎಂದು ಪಂಚಾಯತ್ ಮುಖಾಂತರ ತಿಳಿಸಲಾಗಿದೆ .
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರ ಮಲ್ಲಿಕಾ ಪೂಜಾರಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಸದಸ್ಯರುಗಳಾದ ಜಗನಾಥ್ ಶೆಟ್ಟಿ ನಡುಮನೆ, ರಾಮಣ್ಣ ಗೌಡ ಗುಂಡೋಲೆ, ಗೀತಾ, ಸ್ವಚ್ಛತೆ ವಾಹಿನಿ, ಸಂಜೀವಿನಿ ಒಕ್ಕೂಟದವರು, ಗ್ರಂಥಾಲಯ ಸಿಬ್ಬಂದಿ, ಪಂಚಾಯತ್ ಸಿಬ್ಬಂದಿಗಳು ಮತ್ತುಆಶಾ ಕಾರ್ಯಕರ್ತರು, ಫಿಲೋಮಿನ ಕಾಲೇಜಿನ ಎಂ ಸ್ ಡಬ್ಲ್ಯೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.