Published
11 months agoon
By
Akkare Newsಪುತ್ತೂರು: ರೋಡ್ ರೋಲರ್ ಬಳಸದೆ ರಸ್ತೆಗೆ ಜಲ್ಲಿ ಹಾಕಿ ಚಪ್ ಡಿ ( ತೇಪೆ ) ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ವಿಟ್ಲ ಬೊಬ್ಬೆಕೇರಿಯಲ್ಲಿ ನಡೆದಿದೆ.
ಮಂಗಳೂರಿನಿಂದವಿಟ್ಲಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕರು ಹಾರೆಯ ಮೂಲಕ ರಸ್ತೆ ಹೊಂಡಗಳಿಗೆ ಜಲ್ಲಿಮಿಶ್ರಣವನ್ನು ಕೈಯಿಂದ ಗಟ್ಟಿ ಮಾಡುತ್ತಿದ್ದರು. ಇದನ್ನು ನೋಡಿದ ಶಾಸಕರು ಕಾರು ನಿಲ್ಲಿಸಿ ಕಾಮಗಾರಿ ಮಾಹಿತಿ ಪಡೆದರು. ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರೀತಮ್ ರಿಗೆ ಕರೆ ಮಾಡಿ ಕಳಪೆ ಕಾಮಗಾರಿ ಅಥವಾ ಚಪ್ಪ್ ಡಿ ಕೆಲಸಮಾಡುವುದು ಬೇಡ. ರೋಡ್ ರೋಲರ್ ಬಳಸಿ ಗುಣಮಟ್ಟದ ಜಲ್ಲಿ ಡಾಮಾರು ಬಳಸಿ ಕಾಮಗಾರಿ ನಡೆಸಿ ಎಂದು ಸೂಚನೆ ನೀಡಿದರು.ಶಾಸಕರ ಎಚ್ಚರಿಕೆಯ ಬಳಿಕಕಾಮಗಾರಿ ಸ್ಥಗಿತಗೊಳಿಸಲಾಗಿದೆ.