ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮಾರ್ಚ್ 2 ರಂದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಮಂಜುನಾಥ್ ಭಂಡಾರಿಯವರ ಸಾರಥ್ಯದಲ್ಲಿ ನಡೆಯಲಿದೆ "ಹೊಂಬೆಳಕು 2024"Published
10 months agoon
By
Akkare Newsಫೆಬ್ರವರಿ 01 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ “ಹೊಂಬೆಳಕು 2024” ಎಂಬ ಸ್ಥಳೀಯಾಡಳಿತ ಸಂಭ್ರಮ ಕ್ರೀಡಾ ಕೂಟಕ್ಕೆ ಸಂಪೂರ್ಣ ಸಹಕಾರ ನೀಡಿ ಭಾಗವಹಿಸುವ ಕುರಿತು
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ “ಹೊಂಬೆಳಕು 2024” ಎಂಬ ಸ್ಥಳೀಯಾಡಳಿತ ಸಂಭ್ರಮ ಕ್ರೀಡಾ ಕೂಟವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಕಾರದೊಂದಿಗೆ ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ) ಮತ್ತು ಹೊಂಬೆಳಕು ಕ್ರೀಡಾ ಕೂಟ ಸಂಘಟನಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 02/03/2024ರಂದು ಸಹ್ಯಾದ್ರಿ ಕ್ರೀಡಾಂಗಣ ಅಡ್ಯಾರ್, ಮಂಗಳೂರು ಇಲ್ಲಿ ಜರುಗಲಿರುವುದು
ಉಭಯ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ತಮ್ಮ ದೈನಂದಿನ ಕೆಲಸಗಳ ಒತ್ತಡ ಮರೆತು ಪರಸ್ಪರ ವಿಚಾರ ವಿನಿಮಯದ ಮತ್ತು ಪಕ್ಷ, ಜಾತಿ ಹಾಗೂ ಧರ್ಮಗಳ ವ್ಯತ್ಯಾಸ ಮರೆತು ನಡೆಯುವ ಈ ಸಾಮರಸ್ಯದ ಕ್ರೀಡಾಕೂಟದ ಆಯೋಜನೆಯಲ್ಲಿ ಸರ್ವರೀತಿಯಲ್ಲಿ ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.
ತಾವುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಿ ತಾವೂ ಅಂದು ಇಡೀ ದಿನ “ಹೊಂಬೆಳಕು 2024” ಸ್ಥಳೀಯಾಡಳಿತ ಸಂಭ್ರಮ ಕ್ರೀಡಾ ಕೂಟದಲ್ಲಿ ಉಪಸ್ಥಿತರಿರುವಂತೆ ಈ ಮೂಲಕ ತಮ್ಮನ್ನು ಕೋರುತ್ತೇನೆ
– ಮಂಜುನಾಥ್ ಭಂಡಾರಿ, ಶಾಸಕರು ವಿಧಾನ ಪರಿಷತ್ತು ಸದಸ್ಯರು