ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪದ್ಮರಾಜ್ ಗೆದ್ದರೆ ಸಂಸತ್ತಿನಲ್ಲಿ ನಾವು ಧೈರ್ಯದಿಂದ ಮಾತನಾಡಬಹುದು: ಅಶೋಕ್ ರೈ ಪುತ್ತೂರಿನ ಅಭಿವೃದ್ಧಿಯ ಕನಸಿಗೆ ಕೈಜೋಡಿಸುತ್ತೇನೆ: ಪದ್ಮರಾಜ್ ಆರ್.Published
10 months agoon
By
Akkare Newsಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ಸೋಮವಾರ ಮಂಜಲ್ಪಡ್ಪು ಉದಯಗಿರಿ ಸಭಾಭವನದಲ್ಲಿ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯದಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಅವರು ಕರೆ ಮಾಡಿ ತಿಳಿಸಿದರು, ಸ್ವಲ್ಪ ಪ್ರಯತ್ನ ಮಾಡಿದರೆ 75ರಿಂದ 1 ಲಕ್ಷದ ಮತದ ಅಂತರದಿಂದ ಗೆಲ್ಲಬಹುದು. ಆದ್ದರಿಂದ ಈ ಬಾರಿ ನಮ್ಮ ಪ್ರಯತ್ನವನ್ನು ಹೆಚ್ಚು ಹಾಕಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದರು.ಇದುವರೆಗೆ ಧರ್ಮಾಧಾರಿತ ಚುನಾವಣೆಯನ್ನೇ ಮಾಡಿಕೊಂಡು ಬಂದವರಿಗೆ ನಾವು ಅಭಿವೃದ್ಧಿಯ ಮೂಲಕ ಉತ್ತರ ನೀಡಬೇಕು. ಪ್ರತಿ ಮನೆಗೂ ತೆರಳಿ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ. ಯಾರಿಗೂ ಸುಳ್ಳು ಭರವಸೆ ನೀಡಬೇಡಿ. ನೋವಾದರೂ ಪರವಾಗಿಲ್ಲ, ಕೆಲಸ ಆಗುವುದಿಲ್ಲ ಎಂದು ಅರಿವಾದರೆ ಆಗುವುದಿಲ್ಲ ಎಂದೇ ಹೇಳಬೇಕು ಎಂದರು.
ಹಂತ ಹಂತವಾಗಿ ಉತ್ತರ:
50 ಸಾವಿರ ರೂ. ಅನುದಾನ ತಂದರೆ ಮೂರು ಪ್ರೆಸ್ ಮಾಡುವವರು, ನಮ್ಮ ಅನುದಾನದ ಬಗ್ಗೆ ಮಾತನಾಡುತ್ತಾರೆ. ಜಲಸಿರಿ ಯೋಜನೆ ಬಗ್ಗೆ ಮಾತನಾಡುತ್ತಾರೆ. ಸಚಿವರನ್ನು ಕರೆಸಿ, ೫ ಸಾವಿರ ಜನರನ್ನು ಸೇರಿಸಿ ಜಲಸಿರಿ ಯೋಜನೆಯನ್ನು ಉದ್ಘಾಟಿಸುತ್ತೇನೆ. ಇವರ ಎಲ್ಲಾ ಪ್ರಶ್ನೆಗಳಿಗೂ ಹಂತ ಹಂತವಾಗಿ ಉತ್ತರ ನೀಡುತ್ತೇನೆ ಎಂದರು.
ಪದ್ಮರಾಜ್ ಗೆದ್ದರೆ ಸಂಸತ್ತಿನಲ್ಲಿ ನಾವು ಧೈರ್ಯದಿಂದ ಮಾತನಾಡಬಹುದು:
ಉತ್ತಮ ವಿದ್ಯೆ ಕಲಿತವರು, ಧೈರ್ಯ ಇರುವವರು, ಕೇಂದ್ರದ ಯೋಜನೆಗಳನ್ನು ಜಿಲ್ಲೆಗೆ ತರುವ ಶಕ್ತಿ ಇರುವ ಯುವಕ ಪದ್ಮರಾಜ್ ಈ ಬಾರಿ ನಮ್ಮ ಅಭ್ಯರ್ಥಿ. ಪುತ್ತೂರಿನಲ್ಲಿ ತನ್ನನ್ನು ಗೆಲ್ಲಿಸಿದ ಬಳಿಕ ಜನರು ಧೈರ್ಯವಾಗಿ ಇಲಾಖೆಗಳಿಗೆ ಹೋಗುವಂತಾಗಿದೆ. ಅದೇ ರೀತಿ ಪದ್ಮರಾಜ್ ಅವರನ್ನು ಗೆಲ್ಲಿಸಿದರೆ ದೇಶದ ಶಕ್ತಿ ಕೇಂದ್ರದಲ್ಲಿ ನಾವುಗಳು ಧೈರ್ಯದಿಂದ ಗೆಲ್ಲಬಹುದು ಎಂದರು.
ಪುತ್ತೂರಿಗರ ಮೇಲೆ ನಾಯಕರಿಗೂ ವಿಶ್ವಾಸ:
ಪುತ್ತೂರಿನಲ್ಲಿ ನಡೆಯುವ ಸಿಎಂ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಜನರನ್ನು ಸೇರಿಸಬೇಕು. ಈ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಿದರೆ ಸಕ್ಸಸ್ ಎಂಬ ಮಾತನ್ನು ಹೇಳಿದರು. ಅಂದರೆ ಪುತ್ತೂರಿನ ಜನರ ಮೇಲೆ ನಮ್ಮ ಜಿಲ್ಲೆ, ರಾಜ್ಯದ ನಾಯಕರೂ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ವಲಯ, ಬೂತ್ ನಾಯಕರು ನಮ್ಮೊಂದಿಗಿದ್ದಾರೆ. ಅವರು ಅವಿರತ ಶ್ರಮ ಹಾಕುತ್ತಾರೆ. ತಮ್ಮ ಬೂತ್ ಗಳಲ್ಲಿ ಲೀಡ್ ತಂದುಕೊಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನಿಸುತ್ತೇವೆ ಎಂದು ಅಭ್ಯರ್ಥಿ ಪದ್ಮರಾಜ್ ಅವರಿಗೆ ಭರವಸೆ ನೀಡಿದರು.
ತನ್ನ ಮೇಲಿರುವ ನಿರೀಕ್ಷೆಗಳ ಬಗ್ಗೆ ಅರಿವಿದೆ:
ಪದ್ಮರಾಜ್ ಆರ್. ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗಳ ಬಗ್ಗೆಯೂ ಅರಿವಿದೆ. ಕಾಂಗ್ರೆಸ್ ಲೋಕಸಭಾ ಸದಸ್ಯರು ಅಧಿಕಾರದಲ್ಲಿದ್ದಾಗ ಈ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ. ನಂತರ ಸಾಮರಸ್ಯದ ವೈಭವಕ್ಕೆ ತೊಡಕು ಮಾಡಿ, ಜಾತಿ – ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಬಳಿಕ ಯಾವೊಂದು ಹೊಸ ಯೋಜನೆಗಳನ್ನು ಜಿಲ್ಲೆಗೆ ತಂದಿಲ್ಲ. ಆದ್ದರಿಂದ ಜಿಲ್ಲೆಯ ಸಾಮರಸ್ಯವನ್ನು ಮತ್ತೊಮ್ಮೆ ಹುಟ್ಟುಹಾಕಬೇಕಾಗಿದೆ. ಹೊಸ ಯೋಜನೆಗಳನ್ನು ಜಿಲ್ಲೆಗೆ ತರಬೇಕಾಗಿದೆ ಎಂದರು.ಪ್ರೀತಿಯನ್ನು ಹಂಚುವ ಮೂಲಕ ಬದುಕು ಸಾಗಿಸಬೇಕು. ನಗುಮೊಗದಿಂದಲೇ ಮತ ಕೇಳಲು ಹೋಗಿ. ಕಾಂಗ್ರೆಸ್ ನೀಡಿದ ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸಿ. ಖಂಡಿತವಾಗಿಯೂ ಕಾಂಗ್ರೆಸ್ ಗೆಲುವು ಪಡೆಯುತ್ತದೆ. ಆ ಗೆಲುವು ನಿಮ್ಮದು ಎಂದರು.
ಪುತ್ತೂರಿನ ಅಭಿವೃದ್ಧಿಯ ಕನಸಿಗೆ ಕೈಜೋಡಿಸುತ್ತೇನೆ:
ಚುನಾವಣೆ ಸಂದರ್ಭ ನೀಡಿದ ಭರವಸೆಗಳಾದ ವೈದ್ಯಕೀಯ ಕಾಲೇಜು, ಸ್ಟೇಡಿಯಂ ಮೊದಲಾದ ಯೋಜನೆಗಳನ್ನು ಈಡೇರಿಸಲು ಶಾಸಕ ಅಶೋಕ್ ಕುಮಾರ್ ರೈ ಅವರು ಹೋರಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ, ಯೋಜನೆಗಳ ಈಡೇರಿಕೆಗೆ ಶ್ರಮಿಸುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿಯ ಕನಸಿಗೆ ತಾನು ಕೈಜೋಡಿಸುತ್ತೇನೆ ಎಂದರು.ಉಚಿತ ಆರೋಗ್ಯ ಜನರಿಗೆ ಲಭಿಸಬೇಕು ಎನ್ನುವ ಕನಸು ನನ್ನದು ಕೂಡ. ಇದಕ್ಕೆ ಪುತ್ತೂರಿನ ವೈದ್ಯಕೀಯ ಕಾಲೇಜಿನ ಕನಸು ಪೂರಕವಾಗಿಯೇ ಇದೆ.
ಬಿಜೆಪಿಯ ಭದ್ರಕೋಟೆಯೆಂಬ ಆಲೋಚನೆ ಬೇಡ:
ಇದು ಬಿಜೆಪಿಯ ಭದ್ರಕೋಟೆ ಎನ್ನುವ ಆಲೋಚನೆ ತಲೆಯಲ್ಲಿದ್ದರೆ ತೆಗೆದು ಹಾಕಿ. ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಈ ಭಯದಲ್ಲಿ ಬಿಜೆಪಿ ಈಗಾಗಲೇ ಅಪಪ್ರಚಾರಕ್ಕೆ ಮುಂದಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಹಿಂದು ಧರ್ಮದ ಜ್ಞಾನ, ಬೌದ್ಧ ಧರ್ಮದ ಕರುಣೆ, ಕ್ರೈಸ್ತ ಧರ್ಮದ ಪ್ರೀತಿ, ಮಹಮ್ಮದ್ ಪೈಗಂಬರರ ಸಹೋದರತ್ವವನನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ನಿರ್ಮಿಸೋಣ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದ ಕಾಂಗ್ರೆಸ್ ನಾಯಕರು ಜೊತೆಯಾಗಿದ್ದರು. ಆದ್ದರಿಂದ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ ಎಂದ ಅವರು, ಪದ್ಮರಾಜ್ ಅವರ ಗೆಲುವು ನಿಶ್ಚಿತ. ಮುಂದಿನ ಕೆಲ ದಿನ ನಿದ್ದೆ ಕಡಿಮೆ ಮಾಡಿ ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಿ. ಮುಂದಿನ ಐದು ವರ್ಷ ಪದ್ಮರಾಜ್ ಅವರು ನಿದ್ದೆಗೆಟ್ಟು ನಮ್ಮ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದರು.
ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಿ:
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಗ್ಯಾರೆಂಟಿ ಯೋಜನೆ ಕಸದ ಬುಟ್ಟಿಗೆ ಎಂದು ಹೇಳುತ್ತಿದ್ದವರು ಇಂದು ನಮ್ಮದೊಂದು ಗ್ಯಾರೆಂಟಿ ಇದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸುತ್ತಿದ್ದಂತೆ, ಗ್ಯಾರೆಂಟಿ ಆಶ್ವಾಸನೆಗಳನ್ನು ಜಾರಿಗೆ ತರಲಾಗಿದೆ. ಇದನ್ನು ಮನೆಮನೆಗೂ ತಲುಪಿಸಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಹಿಂದೂ ಧಾರ್ಮಿಕ ಮುಖಂಡ ಪದ್ಮರಾಜ್:
ಕಾವು ಹೇಮನಾಥ್ ಶೆಟ್ಟಿ ಮಾತನಾಡಿ, ಸಜ್ಜನಿಕೆಯ ವ್ಯಕ್ತಿ ಪದ್ಮರಾಜ್ ಅವರು, ಹಿಂದೂ ಧಾರ್ಮಿಕ ಮುಖಂಡನೂ ಹೌದು. ಸಮರ್ಥ ಅಭ್ಯರ್ಥಿಯನ್ನೇ ಕಾಂಗ್ರೆಸ್ ನೀಡಿದೆ. ಅವರನ್ನು ನಾವು ಗೆಲ್ಲಿಸಿಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತ 37558. ಅಂದರೆ ಸುಮಾರು ಒಂದುಕಾಲು ಲಕ್ಷದಷ್ಟು ಮತ ಬಿಜೆಪಿಗೆ ವಿರೋಧವಿದೆ ಎಂದರು.ರಾಷ್ಟ್ರಪ್ರೇಮಿ ಹಾಗೂ ರಾಷ್ಟ್ರಪ್ರೇಮಿಗಳ ನಡುವಿನ ಚುನಾವಣೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನೋಡಿದರೆ ಕಾಂಗ್ರೆಸ್ ರಾಷ್ಟ್ರಪ್ರೇಮಿ ಪಕ್ಷ ಎನ್ನುವುದು ಸಾಬೀತಾಗುತ್ತದೆ ಎಂದರು.
ನೈಋತ್ಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್, ಡಾ. ರಾಜಾರಾಮ್, ಕಾವು ಹೇಮನಾಥ ಶೆಟ್ಟಿ, ಡಿಸಿಸಿ ಜಿಲ್ಲಾ ವಕ್ತಾರ ಎಂ.ಎಸ್. ಮಹಮ್ಮದ್, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಶ್ರೀಪ್ರಸಾದ್ ಪಾಣಾಜೆ, ರಮಾನಾಥ್ ವಿಟ್ಲ, ನವೀನ್ ರೈ, ಫಾರೂಕ್ ಪೆರ್ನೆ, ಶ್ರೀನಿವಾಸ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.