ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕುಕ್ಕೆ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಆದಾಯ 146.01 ಕೋಟಿ ರೂ- ಮತ್ತೆ ಆದಾಯದಲ್ಲಿ ರಾಜ್ಯಕ್ಕೆ ನಂಬ‌ರ್ ವನ್ ದೇವಸ್ಥಾನ

Published

on

ಕುಕ್ಕೆ ಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023ರ ಎಪ್ರಿಲ್‌ನಿಂದ 2024ರ ಮಾರ್ಚ್‌ 31ರ ತನಕದ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ. ಆದಾಯ ಗಳಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್‌ ವನ್‌ ದೇವಸ್ಥಾನವಾಗಿ ಮುಂದುವರಿದಿದೆ. ಕಳೆದ ವರ್ಷ ದೇವಸ್ಥಾನವು 123 ಕೋಟಿ ರೂ. ಆದಾಯ ಗಳಿಸಿತ್ತು.

ಉಳಿದಂತೆ ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ 68.23 ಕೋಟಿ ರೂ. (ಕಳೆದ ವರ್ಷ 59.47 ಕೋ.ರೂ.) ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ ರೂ., ಸವದತ್ತಿ ರೇಣುಕಾ ಯಲ್ಲಮ್ಮ 25.80 ಕೋ.ರೂ., ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ 15.27 ಕೋ.ರೂ., ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ 16.29 ಕೋ.ರೂ., ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ 13.65 ಕೋ.ರೂ., ಬೆಂಗಳೂರಿನ ಬನಶಂಕರಿ ದೇವಸ್ಥಾನ 11.37 ಕೋ.ರೂ. ಆದಾಯ ಗಳಿಸಿದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋಟದ ಉತ್ಪನ್ನ ದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿ ಯಿಂದ, ಹರಕೆ ಸೇವೆಗಳಿಂದ, ಅನು ದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆ ಗಳಿಂದ ಆದಾಯ ಬರುತ್ತಿದೆ. ದೇವಸ್ಥಾನದ ಆದಾಯದ ಒಟ್ಟು ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಉಳಿದಂತೆ ಸೇವೆ ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ನಡೆಯುತ್ತಿದ್ದು ಈ ಲೆಕ್ಕಾಚಾರವು ಇನ್ನೆರಡು ದಿನಗಳಲ್ಲಿ ದೊರಕಲಿದೆ.





ಕುಕ್ಕೆ ದೇಗುಲದ ಆದಾಯ ವಿವರ
2006-07ರಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಆದಾಯ 19.76 ಕೋಟಿ ರೂ. ಆಗಿತ್ತು. 2007-08ರಲ್ಲಿ 24.44 ಕೋಟಿ ರೂ.ಗಳಿಗೆ ನೆಗೆದು ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. ಅನಂತರದ ವರ್ಷಗಳಲ್ಲಿ ರಾಜ್ಯದ ನಂ. 1 ದೇವಸ್ಥಾನ ಎಂಬ ಸ್ಥಾನ ನಿರಂತರವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version