Published
6 months agoon
By
Akkare Newsಪುತ್ತೂರು ಜೂ.08 : ನಾಳೆ ದಿನಾಂಕ :09.07.24 ಮಂಗಳವಾರದಂದು ಸಮಯ ಗಂಟೆ 12ಕ್ಕೆ ಪಡ್ನೂರು ಈಶ್ವರ ಭಟ್ ಅಧ್ಯಕ್ಷರು ಬನ್ನೂರು ರೈತ ಸೇವಾ ಸಂಘ ಇವರ ಮನೆಯಲ್ಲಿ ಅಡಿಕೆ ತೋಟಗಳಿಗೆ ಬಾಧಿಸುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರ ಸಮಸ್ಯೆಯ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮವು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಅವರ ಸಾರಥ್ಯದಲ್ಲಿ ತೋಟಗಾರಿಕಾ ಇಲಾಖೆ ಪುತ್ತೂರು ಇವರ ಸಹಕಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಕುಮಾರ್ರೈ ಅವರು ನೆರವೇರಿಸಲಿದ್ದಾರೆ.
ವಿಚಾರ ವಿನಿಮಯ ರಮೇಶ ಪ್ರಗತಿಪರ ಕೃಷಿಕ. ರೈತರಿಗೆ ಕಾನೂನು ಸಲಹೆ ಚಿದಾನಂದ ಬೈಲಾಡಿ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹೇಶ್. ಡಾಕ್ಟರ್ ವಿನಾಯಕ ಹೆಗ್ಡೆ. ಡಾಕ್ಟರ್ ಭವಿಷ್ಯ. ಸದಾಶಿವ ಭಟ್ ಇವರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಕಾರ್ಯಕ್ರಮದಲ್ಲಿ ಕೃಷಿ ರಕ್ಷಕ ಪ್ರಶಸ್ತಿ ವಿಜೇತ ನಾರಾಯಣ ಭಟ್ ಇವರಿಗೆ ಸನ್ಮಾನ ನಡೆಯಲಿದೆ. ರೈತ ಬಾಂಧವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಘಟಕದ ಕಾರ್ಯದರ್ಶಿ ನವೀನ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.