Published
4 months agoon
By
Akkare Newsಕಾಣಿಯೂರು: ಸವಣೂರು ಮೆಸ್ಕಾಂನ ಮೆಕ್ಯಾನಿಕ್ ಹುದ್ದೆಯಲ್ಲಿದ್ದು, ಚಾರ್ವಾಕ ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುದ್ಮಾರಿನ ಉಮೇಶ್ ಕೆರೆನಾರು ಪದೋನ್ನತಿ ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.
ಕೆಡೆಂಜಿ, ಅರೆಲ್ತಡಿ, ಕುದ್ಮಾರಿನಿಂದ ದೈಪಿಲ, ಕಾಪಿನಕಾಡು, ಖಂಡಿಗ, ಅಂಬುಲ, ಕುಂಬ್ಲಾಡಿ, ನಾಣಿಲ, ಕರಂದ್ಲಾಜೆ, ಅರುವ, ಮುದುವ, ಉದನಡ್ಕ, ಅಬಿಕಾರ ಇಲ್ಲಿನ ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು.
ಯಾವುದೇ ಫಲಾಪೇಕ್ಷೆಯನ್ನು ಬಯಸದೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು.