ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಈ ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ

Published

on

ಪುತ್ತೂರು: ಪುತ್ತೂರು ನಗರ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ರಸ್ತೆಗಳನ್ನು ಮರುಡಾಮರಿಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಅವರು ಸೂನೆ ನೀಡಿದ್ದಾರೆ, ಅದರಂತೆ ಶೀಘ್ರವೇ ಈ ಏಳು ರಸ್ತೆಗಳು ಮರುಡಾಮರೀಕರಣವಾಗಲಿದೆ.

ಯಾವೆಲ್ಲಾ ರಸ್ತೆಗಳು?

ಅರ್ಕದಿಂದ ಹಣಿಯಾರು ರಸ್ತೆ, ಪಾಟ್ರಿಕೋಡಿ- ಆನಡ್ಕ ರಸ್ತೆ, ಸಾಜದಿಂದ ಬುಳೇರಿಕಟ್ಟೆ ರಸ್ತೆ, ಅಳಕೆಮಜಲಿನಿಂದ ವಡ್ಯರ್ಪೆ ರಸ್ತೆ, ವಿನಾಯಕನಗರ ಮಠಂಂತಬೆಟ್ಟು- ದೋರ್ಮ ರಸ್ತೆ, ಪದಡ್ಕದಿಂದ ಮೈಂದನಡ್ಕ ರಸ್ತೆ ಹಾಗೂ ಪುತ್ತೂರು ಬೋಳಂತಾಯದಿಂದ ದರ್ಬೆ ತನದ ರಸ್ತೆಗಳು ಮರುಡಾಮರೀಕರಣವಾಗಲಿದೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಎಲ್ಲಾ ರಸ್ತೆಗಳನ್ನು ಮರುಡಾಮರೀಕರಣ ಮಾಡುವಂತೆ ಶಾಸಕರು ಸೂಚನೆ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ.

 

 

 

 

ಈ ಬಾರಿ ಮಳೆ ಹೆಚ್ಚಿರುವ ಕಾರಣ ರಸ್ತೆಗಳು ಹೊಂಡ ಬಿದ್ದಿದೆ, ಹೆಚ್ಚಾಗಿ ಹೊಂಡಗಳು ಬಿದ್ದಿರುವ ಏಳು ರಸ್ತೆಗಳನ್ನು ಮರುಡಾಮರೀಕರಣಕ್ಕೆ ಆದೇಶಿಸಲಾಗಿದೆ. ಮಾಣಿ- ಸಮಪಾಜೆ ರಾ. ಹೆದ್ದಾರಿ ೨೭೫ ರ ತೇಪೆ ಕಾಮಗಾರಿಗೂ ಸೂಚನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆಯಲಿದೆ.

ಅಶೋಕ್ ರೈ ಶಾಸಕರು, ಪುತ್ತೂರು

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version