ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ರಸ್ತೆ ಹೊಂಡಗಳಿಗೆ ಪ್ಯಾಚ್ ವರ್ಕ್ ಮಾಡಿ: ಇಂಜನಿಯರ್‌ಗಳಿಗೆ ಶಾಸಕ ಅಶೋಕ್ ರೈ ಸೂಚನೆ

Published

on

ಪುತ್ತೂರು: ಮಳೆಗಾಲದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಹಾಗೂ ಲೋಕೋ ಪಯೋಗಿ ಇಲಾಖೆಯ ಪುತ್ತೂರು ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಎಲ್ಲಾ ರಸ್ತೆಗಳ ಹೊಂಡ ಮುಚ್ಚುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಲೋಕೋಪಯೋಗಿ ಇಲಾಖೆಗೆ ಸೂಚನೆಯನ್ನು ನೀಡಿದ್ದು ಅದರಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಹೊಂಡ ಮುಚ್ಚುವ ಕಾರ್ಯ ನಡೆದಿದ್ದು, ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಈ ಬಾರಿ ವಿಪರೀತ ಪ್ರಮಾಣದಲ್ಲಿ ಮಳೆ ಇದ್ದ ಕಾರಣ ಬಹುತೇಕ ರಸ್ತೆಗಳು ಹೊಂಡಮಯವಾಗಿದ್ದು, ಮಳೆ ನಿಲ್ಲದೆ ಇರುವ ಕಾರಣಕ್ಕೆ ತೇಪೆ ಕಾಮಗಾರಿ ನಡೆಸಲೂ ಅಡ್ಡಿಯಾಗಿತ್ತು. ದೊಡ್ಡ ಗಾತ್ರದ ಹೊಂಡಗಳಿಗೆ ವೆಟ್ ಮಿಕ್ಸ್ ಹಾಕಿದ್ದರೂ ಮಳೆಯ ಕಾರಣಕ್ಕೆ ಅದು ಕೊಚ್ಚಿ ಹೋಗಿತ್ತು. ಮಳೆ ನಿಂತ ತಕ್ಷಣವೇ ತೇಪೆ ಕಾಮಗಾರಿ ನಡೆಸುವಂತೆ ಶಾಸಕರು ಇಲಾಖೆಗೆ ಸೂಚನೆಯನ್ನು ನೀಡಿದ್ದರು.

 

ಪ್ಯಾರ್ಚ್ ವರ್ಕ್ ಆಗಲಿರುವ ರಸ್ತೆಗಳು:

ಉಪ್ಪಿನಂಗಡಿ-ಹಿರೆಬಂಡಾಡಿ-ಕೊಯಿಲ-ರಾಮಕುಮಜ, ಅಲಂತಾಯ ನೆಲ್ಯಾಡಿ ರಸ್ತೆ, ನಿಡ್ನಳ್ಳಿ ಪಾಣಜೆ ರಸ್ತೆ, ಮುಡಿಪಿನಡ್ಕ- ಈಶ್ವರಮಂಗಲ, ಪಂಚೋಡಿ ಗಾಳಿಮುಖ ರಸ್ತೆ, ದೇವಸ್ಯ-ಚೆಲ್ಯಡ್ಕ-ಉಪ್ಪಳಿಗೆ- ದರ್ಬೆತ್ತಡ್ಕ- ಶೇಕಮಲೆ- ಕೌಡಿಚ್ಚಾರ್-ಇಲಮತಜೆ ಕೆಯ್ಯರು ರಸ್ತೆ, ಮುಕ್ರುಂಪಾಡಿ- ರೆಂಜಲಾಡಿ-ಸರ್ವೆ-, ಸವನೂರು-ಸಿದ್ದಮೂಲೆ-ಪಂಬಾರು ಮಚ್ಚಿಮಲೆ ರಸ್ತೆ, ಹಂಟ್ಯಾರು- ಬೆಟ್ಟಂಪಾಡಿ ರಸ್ತೆ, ಅರಿಯಡ್ಕ-ನಿಂತಿಕಲ್ ಕಟ್ಟೆ ರಸ್ತೆ, ಕೊಡಿಮರ-ದಾರಂದಕುಕ್ಕು- ಸೇಡಿಯಾ ಪು-ಕಡಂಬು, ರಸ್ತೆ, ಕುದ್ದುಪದವು- ತೋರಣಕಟ್ಟೆ- ಅಜಿಕಲ-ಸಾಜ-ಬಿಳಿಯೂರುಕಟ್ಟೆ ರಸ್ತೆ, ನೆಟ್ಟಣ ರೈಲ್ವೇ ಸ್ಟೇಷನ್ ಜಂಕ್ಷನ್, ಬೊಡ್ಕ- ಕೆಮಜಾಳ ಜಂಕ್ಷನ್, ಕೊಂಬಾರು ಗ್ರಾಮದ ಬಗ್ಗುನಿ-ಮನಿಬಾಂಡ- ಗುಢಂಯ, ಕಲ್ಕುಂದ ರಸ್ತೆ, ಪುತ್ತೂರು ಉಪವಿಭಾಗ ವ್ಯಾಪ್ತಿಯ ಕಾಣಿಯೂರು- ಚಾರ್ವಾಕ- ಬರೆಪ್ಪಾಡಿ ರಸ್ತೆ, ದೋಳ್ಳಾಡಿ- ಎಡಮಂಗಲ- ಉಳಿಪ್ಪು-ಹೊಸ್ಮಠ ಕುಟ್ರುಪ್ಪಾಡಿ-ಉದನೆ, ಶಿಭಾಜೆ-ಶಿಶಿಲ ರಸ್ತೆ, ಕಾಂಚನ -ಪೆರಿಯಡ್ಕ ರಸ್ತೆಯಲ್ಲಿನ ಹೊಂಡಗಳಿಗೆ ಪ್ಯಾಚ್ ವರ್ಕ್ ಮಾಡುವಂತೆ ಸೂಚಿಸಲಾಗಿದ್ದು ಇವುಗಳಲ್ಲಿ ಕೆಲವೊಂದು ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲವು ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ತೇಪೆ ಕಾಮಗಾರಿಗೆ ಒಟ್ಟು ೧೦೪.೮೬ ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.

 

 

ಈ ಬಾರಿ ವಿಪರೀತ ಮಳೆ ಇರುವ ಕಾರಣ ಬಹುತೇಕ ರಸ್ತೆಗಳು ಕೆಟ್ಟು ಹೋಗಿದೆ. ಮಳೆ ನಿಲ್ಲದೆ ಕಾಮಗಾರಿಯೂ ನಡೆಸುವಂತಿರಲಿಲ್ಲ. ಮಳೆ ನಿಂತ ತಕ್ಷಣ ಹೊಂಡ ಬಿದ್ದ ರಸ್ತೆಗಳಿಗೆ ತೇಪೆ ಕಾರ್ಯ ನಡೆಸುವಂತೆ ಇಲಾಖೆಗೆ ಸೂಚಿಸಿದ್ದೇನೆ. ಆ ಪ್ರಕಾರ ಪುತ್ತೂರು ಉಪವಿಭಗ ವ್ಯಾಪ್ತಿಗೊಳಪಟ್ಟ ರಸ್ತೆಗಳ ತೇಪೆ ಕಾಮಗಾರಿಗೆ ಒಟ್ಟು ೧೦೪.೮೬ ಲಕ್ಷ ರೂ ಅನುದಾನವನ್ನು ಸರಕಾರ ನೀಡಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಈಗ ಬಹುತೇಕ ಗ್ರಾಮೀಣ ರಸ್ತೆಗಳು ಸುಗಮ ಸಂಚಾರಕ್ಕೆ ಅಣಿಯಾಗಿದೆ.

ಅಶೋಕ್ ರೈ ಶಾಸಕರು, ಪುತ್ತೂರು

ಚಿತ್ರ ಹಂಟ್ಯಾರು ಬೆಟ್ಟಂಪಾಡಿ ರಸ್ತೆಯಲ್ಲಿ ತೇಪೆ ಕಾರ್ಯ ನಡೆದಿರುವುದು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version