Published
1 year agoon
By
Akkare News
ಪುತ್ತೂರು:ಬನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಅವರಿಗೆ ಸಿಡಿಲು ಬಡಿದು ಅಸ್ವಸ್ಥಗೊಂಡು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಲು ಶಾಸಕ ಅಶೋಕ್ ಕುಮಾರ್ ರೈ ಆಸ್ಪತ್ರೆಗೆ ಭೇಟಿ ನೀಡಿದರು.ಪಿಡಿಒ ಚಿತ್ರಾವತಿ ಅವರಿಗೆ ಡಿ.5ರಂದು ಸಂಜೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು.
ಗ್ರಾ.ಪಂ.ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ದುರ್ಘಟನೆ ನಡೆದಿತ್ತು. ಅವರು ಕಂಪ್ಯೂಟರ್‌ಗೆ ತಂಬ್ ನೀಡಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲಿನ ಅಘಾತವಾದ ಪರಿಣಾಮ ತನ್ನ ಬಲಕಾಲಿನ ಶಕ್ತಿಯನ್ನು ಕಳೆದುಕೊಂಡು ಅಸ್ವಸ್ಥಗೊಂಡ ಪಿಡಿಒ ಚಿತ್ರಾವತಿ ಅವರನ್ನು ಗ್ರಾ.ಪಂ.ಕಚೇರಿಯಲ್ಲಿದ್ದ ಅಧ್ಯಕ್ಷರು ಹಾಗೂ ಸದಸ್ಯರಿಬ್ಬರು ಕಾರಲ್ಲಿ ಕರೆದೊಯ್ದು ಪುತ್ತೂರು ಮಹಾವೀರ ಅಸ್ಪತ್ರೆಗೆ ದಾಖಲಿಸಿದ್ದರು.ಘಟನೆ ವೇಳೆ ಕಚೇರಿ ಕೆಲಸಕ್ಕಾಗಿ ಬಂದಿದ್ದ ಗ್ರಾಮಸ್ಥರು ಇದ್ದರಾದರೂ ಅವರು ಕಂಪ್ಯೂಟರ್‌ನಿಂದ ದೂರವಿದ್ದುದರಿಂದ ಯಾವುದೇ ತೊಂದರೆ ಸಂಭವಿಸಿಲ್ಲ.