Connect with us

ಕಾರ್ಯಕ್ರಮಗಳು

ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ

Published

on

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ತನ್ನ ನವೀಕೃತ, ನೂತನ ಹಾಗೂ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಏಪ್ರಿಲ್ 20 ರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅದರ ಭಾಗವಾಗಿ ಇಂದು ಮೇ 06 ರಂದು ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆಯ ಪುಣ್ಯ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಊರಿನ ಗೌರವಾನ್ವಿತ ವೇದಮೂರ್ತಿ ಶ್ರೀ ಉದಯ ಭಟ್ ಅವರ ವೇದಪಾರಂಗತ ಸಾನ್ನಿಧ್ಯ ಈ ದೈವಿಕ ಆಚರಣೆಗೆ ಆಧ್ಯಾತ್ಮಿಕ ಉತ್ತೇಜನ ನೀಡಿದಂತಾಯಿತು. ಸತತವಾಗಿ 3 ವರ್ಷಗಳಿಂದ ಮಾತಾಭಗಿನಿಯರಿಗೆ ಲಲಿತಾ ಸಹಸ್ರನಾಮ ಹೇಳಿಕೊಟ್ಟ ನೆಲೆಯಲ್ಲಿ ವೇದಮೂರ್ತಿ ಉದಯ್ ಭಟ್ ಇವರನ್ನು ಗೌರವಿಸಲಾಯಿತು . ಸಂಸ್ಥೆಯ ಸಿ ಎಂ. ಡಿ ಶ್ರೀ ಕೇಶವ ಪ್ರಸಾದ್ ಮುಳಿಯ ಅವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳನ್ನು ನುಡಿದರು.

ಈ ಪಾವನ ಕಾರ್ಯಕ್ರಮದ ವಿಶೇಷತೆ ಎಂಬಂತೆ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ‘ಕುಂಕುಮ ಮಹತಿ ’ ಎಂಬ ಶ್ರೇಷ್ಠ ಕಿರುಹೊತ್ತಗೆಯನ್ನು ಕಿರು ಉಡುಗೊರೆಯಾಗಿ ನೀಡಿದರು. ನವ ವಿನ್ಯಾಸದ ಸ್ವರ್ಣ ಲೇಪಿತ ಬೆಳ್ಳಿಯ ಕುಂಕುಮ ಕರಡಿಗೆಯನ್ನು ಹಿರಿಯ ಮಹಿಳೆಯರಿಂದ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಅತ್ಯಂತ ಶ್ರದ್ಧಾಭಕ್ತಿಯಿಂದ ನಿರ್ವಹಿಸಿದರು.
ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರವನ್ನು ನೀಡಿದರು.

 

 

ಲಲಿತಾ ಸಹಸ್ರನಾಮ ಪಠಣ ಮತ್ತು ಕುಂಕುಮಾರ್ಚನೆಯಂತಹ ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ ನೀಡುವಂತಹ ಅತ್ಯುನ್ನತ ಪೂಜಾ ವಿಧಾನಗಳು. ಪ್ರತಿಯೊಂದು ನಾಮದಲ್ಲಿ ದೇವಿಯ ಆಧ್ಯಾತ್ಮಿಕ ಶಕ್ತಿ ಅಡಗಿದ್ದು, ಪ್ರತಿಯೊಂದು ಚಿಟಿಕೆ ಕುಂಕುಮದ ಅರ್ಪಣೆಯಲ್ಲಿಯೂ ಭಕ್ತಿಯ ಪರಾಕಾಷ್ಠೆ ಕಾಣಬಹುದು.

 

ಈ ಸಂಧರ್ಭದಲ್ಲಿ ಭಾಗವಹಿಸಿದ ಶ್ರೀ ದೇವಿಯ ಆರಾಧಕರೆಲ್ಲರೂ ಆಧ್ಯಾತ್ಮಿಕ ಶಕ್ತಿ ಮತ್ತು ಸಂತೋಷದಿಂದ ಕೂಡಿದ ಅನುಭವವನ್ನು ಹೊತ್ತುಮರಳಿದರು.ಮುಂದಿನ ದಿನಗಳಲ್ಲಿಯೂ ಇಂತಹ ಭಕ್ತಿಪೂರ್ಣ ಹಾಗೂ ಸಾಮಾಜಿಕ ಉದ್ದೇಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಂಸ್ಥೆಯ ಆಶಯವಾಗಿದೆ.

ಶ್ರೀಮಾತೆಯ ದಿವ್ಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ. ಜಗನ್ಮಾತೆ ಕುಂಕುಮಶೋಭಿತೆ ಶ್ರೀಲಲಿತೆ ಎಲ್ಲರ ಕೈಹಿಡಿದು ನಡೆಸಲಿ. ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version