Connect with us

ಇತರ

ಧರ್ಮಸ್ಥಳ ಪ್ರಕರಣ: ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ SIT ಎಂಟ್ರಿ, ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧ್ಯಕ್ಷರ ಸಹಿತ ಉದ್ಯೋಗಿಗಳ ವಿವರ ಸಂಗ್ರಹ

Published

on

ಧರ್ಮಸ್ಥಳ: 1995 ರಿಂದ 2014ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಸಂಖ್ಯೆಯ ಮೃತದೇಹಗಳ ಗುಪ್ತ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳದ (ಎಸ್.ಐ.ಟಿ) ಇನ್ಸ್‌ಪೆಕ್ಟರ್‌ ಸಂಪತ್ ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಇಂದು (ಆಗಸ್ಟ್ 6) ಭೇಟಿ ನೀಡಿ, ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಗ್ರಾಮ ಪಂಚಾಯತ್ ಅಧಿಕಾರಿಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಇನ್ಸ್‌ಪೆಕ್ಟ‌ರ್ ಸಂಪತ್‌ ಅವರು ಗ್ರಾಮ ಪಂಚಾಯತ್‌ನಿಂದ ಸಂಗ್ರಹಿಸಿದ ದಾಖಲೆಗಳು, ಆ ಅವಧಿಯಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ವಿವರಗಳು ಮತ್ತು ಅಸಹಜ ಸಾವಿನ (ಯುಡಿಆರ್) ದಾಖಲೆಗಳನ್ನು ಒಳಗೊಂಡಿವೆ. ಈ ದಾಖಲೆಗಳು ದೂರುದಾರನ ಆರೋಪಗಳ ದೃಢೀಕರಣಕ್ಕೆ ಮತ್ತು ತನಿಖೆಯಲ್ಲಿ ಮಹತ್ವದ ಸುಳಿವುಗಳನ್ನು ಒದಗಿಸಲಿವೆ ಎಂದು ತನಿಖಾ ತಂಡ ಭಾವಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version